ಮಂಗಳವಾರ, ಡಿಸೆಂಬರ್ 7, 2021
23 °C

ಚೀನಾ: ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಬಾಹ್ಯಾಕಾಶ ನೌಕೆ ‘ಶೆನ್‌ಶಾವ್‌–13’ನ ಯಶಸ್ವಿ ಉಡಾವಣೆಯ ಗಂಟೆಗಳ ನಂತರ ಮಹಿಳೆ ಸೇರಿ ಮೂವರು  ಗಗನಯಾತ್ರಿಗಳು ಶನಿವಾರ ಬಾಹ್ಯಾಕಾಶ ನಿಲ್ದಾಣ  ‘ಟಿಯಾನ್ಹೆ’ ಪ್ರವೇಶಿಸಿದ್ದಾರೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಗಗನಯಾತ್ರಿಗಳಾದ ಝೈ ಜಿಗಾಂಗ್‌, ವಾಂಗ್‌ ಯಾಪಿಂಗ್‌ ಮತ್ತು ಯೆ ಗುವಾಂಗ್ಫು ಅವರು ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ರೇಡಿಯಲ್‌ ಪೋರ್ಟಲ್‌ ಅನ್ನು ಯಶಸ್ವಿಯಾಗಿ ಜೋಡಿಸಿದರು ಎಂದೂ ಸಂಸ್ಥೆ ಹೇಳಿದೆ.   

ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲು ಗಗನಯಾತ್ರಿಗಳು ಆರು ತಿಂಗಳ ಕಾಲ ಇಲ್ಲಿ ಉಳಿಯಲಿದ್ದಾರೆ. ಚೀನಾ ಇತಿಹಾಸದಲ್ಲೇ ಇದು ಸುದೀರ್ಘ ಅವಧಿಯ ಮಾನವಸಹಿತ ಯೋಜನೆಯಾಗಿದೆ. ವಾಂಗ್‌  ಅವರು ಚೀನಾ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಮೊದಲ ಚೀನಿ ಮಹಿಳಾ ಗಗನಯಾತ್ರಿ ಎನಿಸಿಕೊಂಡಿದ್ದಾರೆ.  

ಶನಿವಾರ ನಸುಕಿನ ಜಾವ ಉಡಾವಣೆಗೊಂಡ ಬಾಹ್ಯಾಕಾಶ ನೌಕೆಯು ಕಕ್ಷೀಯ ಸ್ಥಿತಿಯನ್ನು ಪೂರ್ಣಗೊಳಿಸಿದ ನಂತರ, ‘ಟಿಯಾನ್ಹೆ’ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯಿತು.  

ಇಡೀ ಪ್ರಕ್ರಿಯೆಯು ಸುಮಾರು 6.50 ಗಂಟೆ ಸಮಯ ತೆಗೆದುಕೊಂಡಿತು ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಸಿಎ) ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು