ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಂತಿಲ್ಲ

Last Updated 6 ಜನವರಿ 2021, 16:12 IST
ಅಕ್ಷರ ಗಾತ್ರ

ಬೀಜಿಂಗ್‌: ಶತಮಾನೋತ್ಸವ ಆಚರಿಸಲು ಸಜ್ಜಾಗುತ್ತಿರುವ ಚೀನಾದಲ್ಲಿ ಆಡಳಿತದಲ್ಲಿರುವ ಕಮ್ಯುನಿಸ್ಟ್‌ ಪಕ್ಷವು, ತನ್ನ ನಿಯಮಗಳನ್ನು ಪರಿಷ್ಕರಿಸಿದೆ.

‘ಭಿನ್ನಾಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ತನ್ನ 9.2 ಕೋಟಿ ಸದಸ್ಯರಿಗೆ ಷರತ್ತು ಹಾಕಿದೆ.

ನಾಯಕರು ಅಸಮರ್ಥರಾಗಿದ್ದಲ್ಲಿ ಅವರನ್ನು ವಜಾಗೊಳಿಸಿ ಎಂದು ಕೋರುವ ಹಕ್ಕನ್ನು ಪಕ್ಷದ ಕಾರ್ಯಕರ್ತರ ಗುಂಪಿಗೆ ನೀಡಲಾಗಿದೆ ಎಂದು ಷಿನುಆ ಸುದ್ದಿಸಂಸ್ಥೆಯು ಪ್ರಕಟಿಸಿರುವ ಪಕ್ಷದ ತಿದ್ದುಪಡಿ ನಿಯಮದಲ್ಲಿ ಉಲ್ಲೇಖಿಸಲಾಗಿದೆ. 1921ರಲ್ಲಿ ಮಾವೊ ಜಿಡಾಂಗ್‌ ಅವರಿಂದ ಸ್ಥಾಪಿತವಾದ ‘ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾ’(ಸಿಪಿಸಿ), 1949ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಜುಲೈ ತಿಂಗಳಲ್ಲಿ ಪಕ್ಷವು ಶತಮಾನೋತ್ಸವವನ್ನು ಆಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT