ಬುಧವಾರ, ಮೇ 18, 2022
25 °C

ಪಾಕ್‌ನ ಭದ್ರತಾ ಸಾಮರ್ಥ್ಯದ ಬಗ್ಗೆ ವಿಶ್ವಾಸ ಇಲ್ಲ: ಚೀನಾ ಸಂಸದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಕಳೆದ ತಿಂಗಳು ಕರಾಚಿ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಯ ನಂತರ ತನ್ನ ನಾಗರಿಕರನ್ನು ಸಂರಕ್ಷಿಸುವ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯ ಸಾಮರ್ಥ್ಯದ ಬಗ್ಗೆ ಚೀನಾ ವಿಶ್ವಾಸ ಕಳೆದುಕೊಂಡಿದೆ ಎಂದು ಹಿರಿಯ ಸಂಸದ ಮುಶಾಹಿದ್‌ ಹುಸೇನ್‌ ಹೇಳಿದರು. 

ಈಚೆಗೆ ಕರಾಚಿಯ ವಿಶ್ವವಿದ್ಯಾನಿಲಯದಲ್ಲಿ  ಮಹಿಳಾ ಆತ್ಮಾಹುತಿ ದಾಳಿಕೋರರೊಬ್ಬರು ವಾಹನವನ್ನು ಸ್ಫೋಟಿಸಿದಾಗ ಚೀನಾದ ಮೂವರು ಶಿಕ್ಷಕರು ಸಾವನ್ನಪ್ಪಿದ್ದರು. ಇದು ಪಾಕಿಸ್ತಾನದಲ್ಲಿನ ಚೀನಾ ನಾಗರಿಕರನ್ನು ಗುರಿಯಾಗಿಸಿ ನಡೆದ ಇತ್ತೀಚಿನ ದಾಳಿಯಾಗಿದೆ.

ಕರಾಚಿ ವಿಶ್ವವಿದ್ಯಾಲಯದ ಮೇಲಿನ ದಾಳಿಯು ವರ್ಷದಲ್ಲಿ ಪಾಕಿಸ್ತಾನದಲ್ಲಿ ಚೀನಾ ನಾಗರಿಕರನ್ನು ಗುರಿಯಾಗಿಸಿ ನಡೆಸಿದ ಮೂರನೇ ದಾಳಿಯಾಗಿದೆ.

ದಾಳಿಯ ನಂತರ ಚೀನಾ ಹೊಂದಿರುವ ಮನೋಭಾವದ ಬಗ್ಗೆ ಸಂಸತ್ತಿನ ರಕ್ಷಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಮುಶಾಹಿದ್‌ ಶುಕ್ರವಾರ ಡಾನ್‌ ಪತ್ರಿಕೆಗೆ ಪ್ರತಿಕ್ರಿಯಿಸಿದರು. 

‘ಇದು ಚೀನಾದಲ್ಲಿ ಗಂಭೀರವಾದ ಕಳವಳಕ್ಕೆ ಕಾರಣವಾಗಿದ್ದು ಒಂದು ರೀತಿಯ ಆಕ್ರೋಶವನ್ನುಂಟು ಮಾಡಿದೆ’ ಎಂದು ಹೇಳಿದರು. 

‘ದಾಳಿಗಳು ಒಂದೇ ಮಾದರಿಯಲ್ಲಿ ನಡೆದಿವೆ. ಇದನ್ನು ತಡೆಯಲು ಪಾಕಿಸ್ತಾನ ವಿಫಲವಾಗಿದೆ. ಅದರ ಭದ್ರತೆಯ ಭರವಸೆ ಕೇವಲ ಪದಗಳಿಗೆ ಸೀಮಿತವಾಗಿವೆ ಎಂಬುದು ಸ್ಪಷ್ಟವಾಗಿದೆ. ಭದ್ರತಾ ವ್ಯವಸ್ಥೆಗಳು ನಿದ್ರೆಗೆ ಜಾರಿದಂತಿವೆ’ ಎಂದು ಟೀಕಿಸಿದರು.

‘ಇಂತಹ ದಾಳಿಗಳು ಮುಂದುವರಿದರೆ ಚೀನಾ ಮಾತ್ರವಲ್ಲ ಇತರ ದೇಶಗಳ ಹೂಡಿಕೆದಾರರೂ ಪಾಕಿಸ್ತಾನದಲ್ಲಿ ಯೋಜನೆ ಆರಂಭಿಸಲು ಹಿಂಜರಿಯುತ್ತಾರೆ’ ಎಂದು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು