ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಉಲ್ಬಣಿಸಿದ ಕೋವಿಡ್‌: ಗನ್ಸು ಪ್ರಾಂತ್ಯದ ಎಲ್ಲ ಪ್ರವಾಸಿ ತಾಣಗಳು ಬಂದ್‌

Last Updated 25 ಅಕ್ಟೋಬರ್ 2021, 6:10 IST
ಅಕ್ಷರ ಗಾತ್ರ

ಬೀಜಿಂಗ್‌: ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿರುವ ಚೀನಾದ ವಾಯವ್ಯಭಾಗದಲ್ಲಿರುವ ಗನ್ಸು ಪ್ರಾಂತ್ಯದಲ್ಲಿ ಹೊಸದಾಗಿ ಕೋವಿಡ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಆ ಭಾಗದ ಎಲ್ಲ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ.

ಪ್ರಾಚೀನ ಸಿಲ್ಕ್‌ ರೂಟ್‌ನಲ್ಲಿರುವ ಗನ್ಸು ಪ್ರಾಂತ್ಯವು ಬೌದ್ಧ ಚಿತ್ರಗಳಿಗೆ ಹೆಸರಾಗಿರುವ ಗುಹೆಗಳು(ಡುನ್‌ಹೌಆಂಗ್‌ ಗ್ರೊಟ್ಟೊಯಿಸ್‌) ಮತ್ತು ಇತರ ಧಾರ್ಮಿಕ ಸ್ಥಳಗಳಿಂದ ಖ್ಯಾತಿ ಪಡೆದಿದೆ.

ಈ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸ್ಥಳೀಯವಾಗಿ ಪ್ರಸರಣವಾಗಿರುವ 35 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ಕು ಗನ್ಸು ನಗರಕ್ಕೆ ಸೇರಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಮಂಗೋಲಿಯಾ ವಲಯದ ಒಳಭಾಗದಲ್ಲಿ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಕೆಲವೊಂದು ಪ್ರಾಂತ್ಯಗಳಿಗೆ ಮತ್ತು ನಗರಗಳಿಗೆ ಹರಡಿರುವ ಸಾಧ್ಯತಯೂ ಇದೆ. ಮಂಗೋಲಿಯಾ ಒಳಭಾಗದಲ್ಲಿರುವ (ಇನ್ನರ್ ಮಂಗೋಲಿಯ) ಕೆಲವು ಕಡೆಗಳಲ್ಲಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಫೆಬ್ರವರಿಯಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಪ್ರಯಾಣಿಕರು ಮತ್ತು ಪ್ರವಾಸಿ ಗುಂಪುಗಳಿಗೆ ಕೋವಿಡ್‌ ಸಾಂಕ್ರಾಮಿಕದ ಡೆಲ್ಟಾ ರೂಪಾಂತರ ಸೋಂಕು ಹರಡುವುದನ್ನು ತಡೆಗಟ್ಟಲು ಕಾಳಜಿ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರೇಕ್ಷಕರಿಗೆ ಒಲಿಂಪಿಕ್ಸ್ ಪ್ರವೇಶವನ್ನು ನಿಷೇಧಿಸಲಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಹೊರದೇಶದ ಕ್ರೀಡಾಪಟುಗಳು ಕಡ್ಡಾಯವಾಗಿ ಪ್ರತ್ಯೇಕ ವಾಸದಲ್ಲಿರಬೇಕೆಂದು ತಿಳಿಸಲಾಗಿದೆ.

ಹೊರ ದೇಶಗಳಿಂದ ಭಾನುವಾರ ರಾಜಧಾನಿ ಬೀಜಿಂಗ್‌ಗೆ ಬಂದಿಳಿದ ಜನರನ್ನು ತಪಾಸಣೆಗೆ ಒಳಪಡಿಸಿದ ಅಧಿಕಾರಿಗಳು, ಅವರಿಂದ ನೆಗೆಟಿವ್ ವರದಿಯ ಜೊತೆಗೆ, ಸಾಮಾನ್ಯ ಆರೋಗ್ಯ ತಪಾಸಣಾ ವರದಿಯನ್ನು ಕೊಡುವಂತೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT