ಹಾರುವ ತಟ್ಟೆಗಳ ಬಗ್ಗೆ ಅಮೆರಿಕ ಸಂಗ್ರಹಿಸಿದ ಎಲ್ಲಾ ದಾಖಲೆ ಬಿಡುಗಡೆ ಮಾಡಿದ ಸಿಐಎ

ವಾಷಿಂಗ್ಟನ್: ಆಕಾಶದಲ್ಲಿ ಕಾಣಿಸಿಕೊಳ್ಳುವ ಗುರುತಿಗೆ ಸಿಗದ ಆಕಾಶಕಾಯಗಳಾದ ಹಾರುವ ತಟ್ಟೆಗಳ (ಯುಎಫ್‌ಒ) ಬಗ್ಗೆ ಅಮೆರಿಕ ಸರ್ಕಾರ ಸುಮಾರು ಮೂರು ದಶಕಗಳಿಂದ ಸಂಗ್ರಹಿಸಿದ್ದ ದಾಖಲೆಗಳನ್ನು ಕೇಂದ್ರ ಗುಪ್ತಚರ ದಳ (ಸಿಐಎ) ಬಿಡುಗಡೆ ಮಾಡಿದೆ. ದಾಖಲೆಗಳನ್ನು ಸಾಮಾನ್ಯ ಜನರೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ವರದಿಯಾಗಿದೆ.
ಅಮೆರಿಕ ಸರ್ಕಾರ ಹಲವು ವರ್ಷಗಳಿಂದ ಕಲೆಹಾಕಿದ್ದ ಯುಎಫ್‌ಒ ಬಗೆಗಿನ ಸುಮಾರು 2,700 ಪುಟಗಳಷ್ಟು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಐಎ ತಿಳಿಸಿದೆ.
ಯುಎಫ್‌ಒ ಬಗೆಗಿನ ಮಾಹಿತಿ ಬಿಡುಗಡೆ ಮಾಡಬೇಕು ಎಂದು ಮಾಹಿತಿ ಹಕ್ಕು ಕಾಯ್ದೆಗೆ ಸಮಾನವಾದ, ಮಾಹಿತಿ ಸ್ವಾತಂತ್ರ್ಯ ಕಾಯ್ದೆಯಡಿಯಲ್ಲಿ ಕಳೆದ 25 ವರ್ಷಗಳಿಂದ ಸಾಕಷ್ಟು ಮನವಿಗಳು ಸಲ್ಲಿಕೆಯಾಗಿದ್ದವು. ಅದರಂತೆ ಮಾಹಿತಿ ಬಿಡುಗಡೆ ಮಾಡಲಾಗಿದೆ. ಸರ್ಕಾರದ ರಹಸ್ಯ ಮಾಹಿತಿಗಳನ್ನೊಳಗೊಂಡ ಆನ್‌ಲೈನ್ ಆರ್ಕೈವ್ ‘ಬ್ಲಾಕ್ ವಾಲ್ಟ್’ನಲ್ಲಿ ಈ ಮಾಹಿತಿಗಳು ಲಭ್ಯವಿವೆ ಎಂದು ದಿ ಗಾರ್ಡಿಯನ್ ವರದಿಮಾಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.