ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಇಂಧನ ಬಳಕೆ: ಪ್ರಧಾನಿ ಮೋದಿ ಕ್ರಮಕ್ಕೆ ಅಮೆರಿಕ ಶ್ಲಾಘನೆ

Last Updated 23 ಜುಲೈ 2021, 7:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಭಾರತದಲ್ಲಿ ಕೋವಿಡ್‌–19 ಪಿಡುಗು ಹಲವಾರು ಸವಾಲುಗಳನ್ನು ಒಡ್ಡಿದೆ. ಈ ನಡುವೆಯೂ, ದೇಶದಲ್ಲಿ ಶುದ್ಧ ಇಂಧನ ಉತ್ಪಾದನೆ, ಬಳಕೆಗೆಪ್ರಧಾನಿ ನರೇಂದ್ರ ಮೋದಿ ಅವರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸ್ವಾಗತಾರ್ಹ’ ಎಂದು ಅಮೆರಿಕ ಹೇಳಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಜಾನ್‌ ಕೆರ‍್ರಿಯವರ ಹಿರಿಯ ಸಲಹೆಗಾರ ಜೋನಾಥನ್‌ ಪರ್ಶಿಂಗ್‌ ಅವರು ಸಂಸದೀಯ ಸಮಿತಿಗೆ ಈ ವಿಷಯ ತಿಳಿಸಿದ್ದಾರೆ.

‘ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿಅಮೆರಿಕ ಹಾಗೂ ಭಾರತ ಬದ್ಧತೆ ಹೊಂದಿರುವ ಪಾಲುದಾರ ರಾಷ್ಟ್ರಗಳಾಗಿವೆ’ ಎಂದೂ ಅವರು ಸಮಿತಿಗೆ ತಿಳಿಸಿದರು.

‘ಯುಎಸ್‌–ಇಂಡಿಯಾ ಕ್ಲೈಮೇಟ್‌ ಆ್ಯಂಡ್‌ ಕ್ಲೀನ್‌ ಎನರ್ಜಿ ಅಜೆಂಡಾ–2030 ಪಾರ್ಟನರ್‌ಶಿಪ್‌’ ಒಪ್ಪಂದಕ್ಕೆ ಅಮೆರಿಕ ಹಾಗೂ ಭಾರತ ಕಳೆದ ಏಪ್ರಿಲ್‌ನಲ್ಲಿ ಸಹಿ ಹಾಕಿವೆ. ಪರಿಸರಕ್ಕೆ ಹಾನಿ ಮಾಡದಂತಹ ಶುದ್ಧ ಇಂಧನ, ತಂತ್ರಜ್ಞಾನಗಳ ಬಳಕೆ ಹಾಗೂ ಹವಾಮಾನ ಬದಲಾವಣೆ ತಡೆಗಾಗಿ ಕಾರ್ಯಸೂಚಿಯನ್ನು ಉಭಯ ದೇಶಗಳು ರೂಪಿಸಿವೆ’ ಎಂದೂ ಪರ್ಶಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT