ಗುರುವಾರ , ಅಕ್ಟೋಬರ್ 21, 2021
29 °C
ಮುಂಬರುವ ಸಂಸತ್ ಚುನಾವಣೆಯಲ್ಲಿ ನಿರ್ಧಾರ

ಜರ್ಮನಿ: ಅಂಗೆಲಾ ಮೆರ್ಕೆಲ್ ಉತ್ತರಾಧಿಕಾರಿ ಯಾರು?

ಎಪಿ Updated:

ಅಕ್ಷರ ಗಾತ್ರ : | |

ಅಂಗೆಲಾ ಮೆರ್ಕೆಲ್

ಬರ್ಲಿನ್: ಜರ್ಮನಿಯಲ್ಲಿ 16 ವರ್ಷಗಳ ಕಾಲ ಆಡಳಿತ ನಡೆಸಿದ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದನ್ನು ಭಾನುವಾರ ನಡೆದ ಸಂಸತ್ ಚುನಾವಣೆ ನಿರ್ಧರಿಸಲಿದೆ.

ಜರ್ಮನಿಯ ಅಭಿವೃದ್ಧಿಯಲ್ಲಿ ‘ಉಕ್ಕಿನ ಮಹಿಳೆ’ ಎನಿಸಿಕೊಂಡಿದ್ದ ಅಂಗೆಲಾ ಮೆರ್ಕೆಲ್ ಅವರ ಕೊಡುಗೆ ದೊಡ್ದದು.  ಚುನಾವಣೆಯಲ್ಲಿ ಮರ್ಕೆಲ್ ಸ್ಪರ್ಧಿಸುತ್ತಿಲ್ಲ. 

ಮೆರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷವು ಅರ್ಮಿನ್ ಲಾಸ್ಚೆಟ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಇತ್ತೀಚಿನ ಚುನಾವಣಾ ಸಮೀಕ್ಷೆಯ ಪ್ರಕಾರ, ಚುನಾವಣೆಯಲ್ಲಿ ಸೆಂಟರ್–ರೈಟ್ ಯೂನಿಯನ್ ಬಣ ಹಾಗೂ  ಸೆಂಟರ್ ಲೆಫ್ಟ್ ಸೋಷಿಯಲ್ ಡೆಮಾಕ್ರಟಿಕ್‌ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಪರಿಸರವಾದಿ ಅನ್ನಲೇನಾ ಬೇರ್‌ಬಾಕ್ ಅವರು ಮೊದಲ ಬಾರಿಗೆ ಚಾನ್ಸಲರ್ ಹುದ್ದೆಗಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ತಲುಪುವುದು ಕೂಡಾ ಅನುಮಾನ ಎನ್ನಲಾಗಿದೆ.

ಚುನಾವಣೆಯಲ್ಲಿ ಯಾವುದೇ ಪಕ್ಷವು ಸಂಪೂರ್ಣ ಬಹುಮತ ಪಡೆಯುವ ನಿರೀಕ್ಷೆ ಇಲ್ಲ ಎಂದೂ ಸಮೀಕ್ಷೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು