ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳನ್ನು ಮುಕ್ತವಾಗಿಸಿದ ಥಾಯ್ಲೆಂಡ್, ಕಾಂಬೋಡಿಯಾ

Last Updated 27 ಅಕ್ಟೋಬರ್ 2021, 6:34 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಥಾಯ್ಲೆಂಡ್‌ ಪ್ರವಾಸೋದ್ಯಮದ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಪೂರ್ಣ ಪ್ರಮಾಣದ ಲಸಿಕೆ ಪಡೆದಿರುವ 40 ರಾಷ್ಟ್ರಗಳ ಪ್ರಯಾಣಿಕರಿಗೆ ಥಾಯ್ಲೆಂಡ್ ತನ್ನ ಪ್ರವಾಸೋದ್ಯಮ ಕ್ಷೇತ್ರದ ಬಾಗಿಲನ್ನು ಸೋಮವಾರದಿಂದ ತೆರೆದಿಟ್ಟಿದೆ.

ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದ 46 ದೇಶಗಳ ಪ್ರವಾಸಿಗರಿಗೆ ನವೆಂಬರ್ 1ರಿಂದ ಯಾವುದೇ ಕ್ವಾರಂಟೈನ್ ಇಲ್ಲದೇ ಥಾಯ್ಲೆಂಡ್ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಕಾಂಬೋಡಿಯಾದಲ್ಲೂ ಸುಧಾರಣೆ (ಫನೊಮ್‌ ಪೆಂಚ್‌ ವರದಿ): ಮುಂದಿನ ತಿಂಗಳ ಕೊನೆಯ ಭಾಗದಿಂದ ಎಲ್ಲ ಪ್ರವಾಸಿ ತಾಣಗಳನ್ನು ಹಂತ ಹಂತವಾಗಿ ತೆರೆಯಲು ಸಿದ್ಧತೆ ನಡೆಸಿದ್ದು, ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿರುವ ವಿದೇಶಿ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಕಾಂಬೊಡಿಯಾ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ನವೆಂಬರ್ 30ರ ನಂತರ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದಿರುವ ವಿದೇಶಿ ಪ್ರವಾಸಿಗರಿಗೆ, ಯಾವುದೇ ಕ್ಯಾರಂಟೈನ್ ಇಲ್ಲದೇ ಐದು ದಿನಗಳ ಕಾಲ ನಿಗದಿತ ತಾಣಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ನಿಗದಿತ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಎರಡು ಕಡಲ ತೀರಗಳು, ಥಾಯ್ಲೆಂಡ್‌ ಕೊಲ್ಲಿ ಪ್ರಾಂತ್ಯದಲ್ಲಿರುವ ಶಿಹಾನೌಕುವಿಲ್ಲೆ ಮತ್ತು ಕೊಹ್‌ ಕಾಂಗ್‌ ಪ್ರವಾಸಿತಾಣಗಳು ಸೇರಿವೆ. ಜನವರಿ ತಿಂಗಳ ನಂತರ, ಸಿಯೇಮ್ ರೀಪ್ ಪ್ರಾಂತ್ಯ, ಆಂಗ್‌ಕೊರ್ ದೇವಾಲಯಗಳಿಗೆ ಕ್ವಾರಂಟೈನ್ ಮುಕ್ತವಾಗಿ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.

ವಿದೇಶಿ ಪ್ರವಾಸಿಗರು ಪ್ರವಾಸಿ ತಾಣಗಳ ಭೇಟಿಗೂ ಮುನ್ನ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಜೊತೆಗೆ, ಕೋವಿಡ್‌ ರ‍್ಯಾಪಿಡ್‌ ಟೆಸ್ಟ್‌ಗೆ ಒಳಗಾಗಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT