ಶನಿವಾರ, ಏಪ್ರಿಲ್ 17, 2021
31 °C
ವಿಶ್ವಸಂಸ್ಥೆಯಲ್ಲಿ ನಡೆದ ಇಂಧನ ಕುರಿತ ಚರ್ಚೆಯಲ್ಲಿ ಕೇಂದ್ರ ಸಚಿವ ರಾಜ್‌ಕುಮಾರ್ ಸಿಂಗ್‌

ಪರಿಶುದ್ಧ ಇಂಧನ ಗುರಿ ತಲುಪಲು ಜಾಗತಿಕ ಕ್ರಮ ಅಗತ್ಯ: ಸಚಿವ ರಾಜ್‌ಕುಮಾರ್ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಎಲ್ಲರಿಗೂ ಕೈಗೆಟುಕುವ ಮತ್ತು ಶುದ್ಧ ಇಂಧನ ಲಭ್ಯವಾಗುವಂತೆ ಮಾಡುವುದು ಸುಸ್ಥಿರ ಅಭಿವೃದ್ಧಿಯ ಗುರಿಯಾಗಿದ್ದು, ಈ ಗುರಿ ತಲುಪಲು ಜಾಗತಿಕ ಮಟ್ಟದ ಸಹಕಾರ, ದೃಢವಾದ ರಾಜಕೀಯ ಇಚ್ಛಾಶಕ್ತಿಯ ಜತೆಗೆ ಇಂಧನ ಲಭ್ಯತೆಯನ್ನು ಹೆಚ್ಚಿಸುವ ಹಾಗೂ ನವೀಕರಿಸಬಹುದಾದ ಇಂಧನಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಭಾರತ ಹೇಳಿದೆ.

ಇಂಧನ ವಿಷಯದ ಮೇಲಿನ ವಿಶ್ವಸಂಸ್ಥೆಯ ಉನ್ನತ ಮಟ್ಟದ ಚರ್ಚೆಯಲ್ಲಿ ವರ್ಚುವಲ್‌ ರೂಪದಲ್ಲಿ ಪಾಲ್ಗೊಂಡು ಮಾತನಾಡಿದ  ಕೇಂದ್ರದ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ರಾಜ್ ಕುಮಾರ್ ಸಿಂಗ್, ಈ ವಿಷಯದಲ್ಲಿ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು  ಅಂತರರಾಷ್ಟ್ರೀಯ ಸಮುದಾಯಗಳ ಸಹಭಾಗಿತ್ವ ಅಗತ್ಯ ಎಂದರು.

‘20ಕ್ಕೂ ಅಧಿಕ ರಾಷ್ಟ್ರಗಳು ಈ ಚರ್ಚೆಯಲ್ಲಿ ಪಾಲ್ಗೊಂಡವು. ಜಗತ್ತಿನಲ್ಲಿ ಇನ್ನೂ 80 ಕೋಟಿ ಜನರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. 300 ಕೋಟಿ ಜನರು ಸ್ವಚ್ಛ, ಆಧುನಿಕ ಅಡುಗೆ ಇಂಧನದಿಂದ ವಂಚಿತರಾಗಿದ್ದಾರೆ, ಘನ ಅಡುಗೆ ಇಂಧನಗಳ ಸಮಸ್ಯೆಯಿಂದಲೇ ವರ್ಷಕ್ಕೆ 16 ಲಕ್ಷ ಮಂದಿ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ಅವಧಿಗೆ ಮೊದಲೇ ಸಾಯುತ್ತಿದ್ದಾರೆ’ ಎಂದು ಚರ್ಚೆಯ ವೇಳೆ ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು