ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಆಗಸ್ಟ್ 12ಕ್ಕೆ ಕೋವಿಡ್-19 ಲಸಿಕೆ ನೋಂದಣಿ: ರಷ್ಯಾ

Last Updated 10 ಆಗಸ್ಟ್ 2020, 5:11 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದಲ್ಲಿ ಅಭಿವೃದ್ಧಿ ಪಡಿಸಿರುವ ಕೋವಿಡ್-19 ಲಸಿಕೆಯನ್ನು ಆಗಸ್ಟ್ 12ರಂದು ನೋಂದಣಿ ಮಾಡಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ.

ಗಮಲೇಯಾ ಸೆಂಟರ್ ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಆಗಸ್ಟ್12ರಂದು ನೋಂದಣಿ ಮಾಡಲಾಗುವುದು.ಈಗ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್‌ನೇವ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಅಂಕಿ ಅಂಶಗಳ ಪ್ರಕಾರ ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕಿತರ ಸಂಖ್ಯೆ 19,792,519 ಆಗಿದ್ದು, 7,30,089 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 5,044,821 ಆಗಿದ್ದು ಬ್ರೆಜಿಲ್‌ನಲ್ಲಿ 3,035,422 ಮಂದಿಗೆ ಸೋಂಕು ತಗಲಿದೆ.ಅಮೆರಿಕದಲ್ಲಿ ಈವರೆಗೆ 1,62,938 ಮಂದಿ ಮತ್ತು ಬ್ರೆಜಿಲ್‌ನಲ್ಲಿ 1,01,049 ಮಂದಿ ಸಾವಿಗೀಡಾಗಿದ್ದಾರೆ.

ಬ್ರಿಟನ್‌ನಲ್ಲಿ 1,000 ಹೊಸ ಪ್ರಕರಣ
ಬ್ರಿಟನ್‌ನಲ್ಲಿ ಭಾನುವಾರ 1,062 ಹೊಸ ಪ್ರಕರಣಗಳು ವರದಿಯಾಗಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಮತ್ತು ಮರಣ ಸಂಖ್ಯೆಯೂ ಇಲ್ಲಿ ಇಳಿಮುಖವಾಗಿದೆ, ಭಾನುವಾರ 8 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಬ್ರಿಟನ್‌ನ ಅಧಿಕೃತ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 46,574 ಆಗಿದ್ದು ಯುರೋಪ್‌ನಲ್ಲಿ ಅತೀ ಹೆಚ್ಚು ಮರಣ ಸಂಭವಿಸಿರುವ ದೇಶವಾಗಿದೆ ಇದು.

ಸಿಂಗಪುರ್‌ನಲ್ಲಿ ಕೋವಿಡ್-19 ಲಸಿಕೆ ಕ್ಲಿನಿಕಲ್ ಟ್ರಯಲ್ ಆರಂಭ
ಸಿಂಗಪುರ್‌ನಲ್ಲಿ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ 55,000 ದಾಟಿದೆ. ಅದೇ ವೇಳೆ ಕೋವಿಡ್-19 ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ.
ಡ್ಯೂಕ್- ಎನ್‌ಯುಎಸ್ ಮೆಡಿಕಲ್ ಸ್ಕೂಲ್ ಮತ್ತು ಅಮೆರಿಕದ ಅರ್ಟರಸ್ ಥೆರಾಪ್ಯುಟಿಕ್ಸ್ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಗೆ ಲೂನಾರ್- Cov19 ಎಂದು ಹೆಸರಿಡಲಾಗಿದೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.

ಟ್ರಯಲ್‌‌ಗೆ ಸಿದ್ಧವಾಗಿದ್ದೇವೆ ಎಂದು ಮುಂದೆ ಬಂದಿರುವ ವ್ಯಕ್ತಿಗಳನ್ನು ಅಧ್ಯಯನಕಾರರು ಪರೀಕ್ಷೆಗೊಳಪಡಿಸುತ್ತಿದ್ದು ಅಕ್ಟೋಬರ್ ಹೊತ್ತಿಗೆ ಇದು ಮುಗಿಯಲಿದೆ, ಲಸಿಕೆಯ ಟ್ರಯಲ್ ಪರೀಕ್ಷೆಯನ್ನು ದಿ ಸಿಂಗ್‌ಹೆಲ್ತ್ ಇನ್ವೆಸ್ಟಿಗೇಷನಲ್ ಮೆಡಿಸಿನ್ ಯುನಿಟ್ ಮೇಲ್ವಿಚಾರಣೆ ನಡೆಸಲಿದೆ.
ಬ್ರೆಜಿಲ್‌ನಲ್ಲಿ1 ಲಕ್ಷ ಮಂದಿ ಸಾವು
ಬ್ರೆಜಿಲ್‌ನಲ್ಲಿ 3 ಲಕ್ಷ ಕ್ಕಿಂತಲೂ ಅಧಿಕ ಸೋಂಕಿತರಿದ್ದು, ಸಾವಿನ ಸಂಖ್ಯೆ 1 ಲಕ್ಷ ದಾಟಿದೆ.ಸಾವೋ ಪಾಲೊದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಸಾವಿನ ಸಂಖ್ಯೆ 25 ,016 ಆಗಿದೆ, ರಿಯೊ ಡಿ ಜೆನೆರೊದಲ್ಲಿ ಸಾವಿನ ಸಂಖ್ಯೆ 14,070 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT