ಗುರುವಾರ , ನವೆಂಬರ್ 26, 2020
21 °C

Covid-19 World Update: ಬ್ರೆಜಿಲ್‌ನಲ್ಲಿ 31 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಮತ್ತೆ ಹೆಚ್ಚತೊಡಗಿದ್ದು, ಒಂದೇ ದಿನ 31,985 ಹೊಸ ಪ್ರಕರಣಗಳು ಪತ್ತೆಯಾಗಿವೆ. 503 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ, ಆ ದೇಶದಲ್ಲಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 53.32 ಲಕ್ಷ ದಾಟಿದ್ದು, 1.5 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 47.8 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ವರ್ಲ್ಡೋಮೀಟರ್ ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ ಪ್ರಕಾರ, ವಿಶ್ವದಾದ್ಯಂತ ಈವರೆಗೆ 4.1 ಕೋಟಿಗೂ ಹೆಚ್ಚು ಮಂದಿ ಸೋಂಕಿತರಾಗಿದ್ದು, 11 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಟ್ಟು 3.1 ಕೋಟಿಗೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಕೆಲವು ದೇಶಗಳಲ್ಲಿ ಮತ್ತೆ ಸೋಂಕು ಹರಡುವಿಕೆ ಹೆಚ್ಚತೊಡಗಿದೆ. ಜರ್ಮನಿಯಲ್ಲಿ ಒಂದೇ ದಿನ 12,519, ಸ್ಪೇನ್‌ನಲ್ಲಿ 20,986, ಇಟಲಿಯಲ್ಲಿ 16,079, ರಷ್ಯಾದಲ್ಲಿ 15,971 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಅತಿಹೆಚ್ಚು ಮಂದಿ ಸೋಂಕಿಗೆ ತುತ್ತಾಗಿರುವ ಅಮೆರಿಕದಲ್ಲಿ ಒಂದೇ ದಿನ 73,049 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 959 ಜನ ಮೃತಪಟ್ಟಿದ್ದಾರೆ. ಅಲ್ಲಿ ಈವರೆಗೆ 86.6 ಲಕ್ಷಕ್ಕೂ ಹೆಚ್ಚು ಜನ ಸೊಂಕಿತರಾಗಿದ್ದು, 2.2 ಲಕ್ಷಕ್ಕೂ ಹೆಚ್ಚು ಸೋಂಕಿತರು ಅಸುನೀಗಿದ್ದಾರೆ. ಈವರೆಗೆ 56.5 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು