ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕ ಕ್ಷಿಪಣಿ ದಾಳಿ: ಪ್ರತ್ಯುತ್ತರದ ಬದಲು ಸಂಯಮ ತೋರಿದ್ದೇವೆ– ಇಮ್ರಾನ್

Last Updated 14 ಮಾರ್ಚ್ 2022, 3:54 IST
ಅಕ್ಷರ ಗಾತ್ರ

ಲಾಹೋರ್: ‘ಭಾರತದ ಕ್ಷಿಪಣಿ ತನ್ನ ನೆಲದ ಮೇಲೆ ಬಿದ್ದ ಘಟನೆಗೆ ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದಿತ್ತು. ಆದರೆ, ಆ ರೀತಿ ಮಾಡದೇ ಸಂಯಮ ತೋರಿದ್ದೇವೆ’ ಎಂದು ಪ್ರಧಾನಿ ಇಮ್ರಾನ್‌ ಖಾನ್ ಭಾನುವಾರ ಹೇಳಿದ್ದಾರೆ.

ಪಂಜಾಬ್‌ ಪ್ರಾಂತ್ಯದ ಹಫೀಜಾಬಾದ್‌ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವ ಮೂಲಕ ದೇಶವನ್ನು ಬಲಿಷ್ಠಗೊಳಿಸಬೇಕು’ ಎಂದರು.

ಭಾರತ ಸೇನೆಯ ಶರವೇಗದ ಸೂಪರ್‌ಸಾನಿಕ್ ಕ್ಷಿಪಣಿಯು ಮಾರ್ಚ್ 9ರಂದು ಆಕಸ್ಮಿಕವಾಗಿ ‍ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚುನ್ನು ನಗರದ ಸಮೀಪ ನೆಲಕ್ಕೆ ಅಪ್ಪಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT