ಸೋಮವಾರ, ಮೇ 16, 2022
29 °C

ನೆದರ್ಲೆಂಡ್ಸ್‌: ಲಾಕ್‌ಡೌನ್‌ ವಿರೋಧಿಸಿ ಪ್ರತಿಭಟನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಉಟ್ರಕ್ಟ್‌, ನೆದರ್ಲೆಂಡ್ಸ್‌: ಹೊಸದಾಗಿ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಧಿಸಿರುವ ಲಾಕ್‌ಡೌನ್‌ ವಿರೋಧಿಸಿ ನೆದರ್ಲೆಂಡ್ಸ್‌ನ ಉತ್ತರ ಭಾಗದ ಈ ನಗರದಲ್ಲಿ ಶನಿವಾರ ರಾತ್ರಿ ಪ್ರತಿಭಟನೆಗಳು ನಡೆದವು. ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 8 ವರೆಗೆ ತೆರೆಯುವಂತೆ ಒತ್ತಾಯಿಸಲಾಯಿತು.

ಆಮ್‌ಸ್ಟರ್‌ಡ್ಯಾಮ್‌ನ ಉತ್ತರಕ್ಕೆ 140 ಕಿ.ಮೀ. ದೂರದಲ್ಲಿರುವ ಲೀವಾರ್ಡನ್‌ನಲ್ಲಿರುವ ಕೇಂದ್ರ ಚೌಕದಲ್ಲಿ ನೂರಾರು ಯುವಕರು ಪ್ರತಿಭಟನಾ ರೂಪದಲ್ಲಿ ಪಟಾಕಿಗಳನ್ನು ಸಿಡಿಸಿ, ಪಂಜಿನ ಮೆರವಣಿಗೆ ನಡೆಸಿದರು. 

ದೇಶದ ದಕ್ಷಿಣ ಭಾಗದ ನಗರವಾದ ಬ್ರೆಡಾದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮೀರಿ ರಾತ್ರಿ ವೇಳೆ ಬಾರ್‌ಗಳು ತೆರೆದಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಹೊಸ ಲಾಕ್‌ಡೌನ್‌ ಅನ್ನು ವಿಧಿಸಿರುವುದನ್ನು ಒಪ್ಪಿಕೊಳ್ಳಲು ನನಗೆ ಬಹಳ ಕಷ್ಟವಾಗುತ್ತಿದೆ. ವಿದ್ಯಾರ್ಥಿಯಾಗಿ ನನ್ನ ಸಾಮಾಜಿಕ ಜೀವನ ಮತ್ತು ವಿಶ್ರಾಂತಿ ಪಡೆಯುವ ವಿಧಾನವನ್ನು ಹಾಳು ಮಾಡುವ ಇದು ತುಂಬಾ ಕೆಟ್ಟದಾಗಿದೆ’ ಎಂದು ಉಟ್ರಕ್ಟ್‌ನ ವಿದ್ಯಾರ್ಥಿನಿ ಸುಝೇನ್ ವ್ಯಾನ್ ಡಿ ವೀರ್ಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನೆದರ್ಲೆಂಡ್ಸ್‌ನಲ್ಲಿ ಶೇ 85ರಷ್ಟು ಜನಸಂಖ್ಯೆ ಸಂಪೂರ್ಣ ಲಸಿಕೆ ಪಡೆದಿದ್ದರೂ ಗುರುವಾರ ಒಂದೇ ದಿನ 16,364 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು