ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಋತುಮಾನಕ್ಕೆ ತಕ್ಕಂತೆ ಬಾಧಿಸುವ ಕಾಯಿಲೆಯಾಗುವ ಸಾಧ್ಯತೆ

ವಿಶ್ವಸಂಸ್ಥೆಯ ತಜ್ಞರ ತಂಡ ಅಭಿಮತ
Last Updated 18 ಮಾರ್ಚ್ 2021, 7:29 IST
ಅಕ್ಷರ ಗಾತ್ರ

ಜಿನಿವಾ: ಕೋವಿಡ್‌–19 ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯ ರೂಪ ಪಡೆಯುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.

ಆದರೆ, ಹವಾಮಾನದಲ್ಲಿನ ಬದಲಾವಣೆಗಳನ್ನು ಆಧಾರವಾಗಿಟ್ಟುಕೊಂಡು, ಈ ಪಿಡುಗಿನ ಪ್ರಸರಣ ತಡೆಯಲು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದೂ ಎಚ್ಚರಿಸಿದೆ.

ಕೋವಿಡ್‌ ಪ್ರಸರಣದ ಮೇಲೆ ಹವಾಮಾನದಲ್ಲಿನ ಬದಲಾವಣೆ, ವಾಯುವಿನ ಗುಣಮಟ್ಟ ಯಾವ ರೀತಿಯ ಪ್ರಭಾವ ಬೀರುತ್ತವೆ ಎಂಬ ಬಗ್ಗೆ ಅಧ್ಯಯನ ನಡೆಸಲು ರಚಿಸಿದ್ದ ತಜ್ಞರ ತಂಡ, ಈ ಸೋಂಕು ಕಾಲಕಾಲಕ್ಕೆ ಮನುಕುಲವನ್ನು ಪೀಡಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಘಟನೆ ರಚಿಸಿದ್ದ ಈ ತಂಡದಲ್ಲಿ 16 ಜನ ತಜ್ಞರಿದ್ದಾರೆ.

‘ಉಸಿರಾಟದಲ್ಲಿ ತೊಂದರೆ ತರುವ ವೈರಾಣು ಸೋಂಕುಗಳು ನಿರ್ದಿಷ್ಟ ಋತುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಇನ್‌ಫ್ಲೂಯೆಂಜಾ ಹಾಗೂ ಸಮಶೀತೋಷ್ಣ ವಾತಾವರಣದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿ ಕಂಡುಬರಲಿದೆ’ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT