ಬುಧವಾರ, ಸೆಪ್ಟೆಂಬರ್ 22, 2021
23 °C

ಕೋವಿಡ್-19: ಕಡುಬಡತನ ರೇಖೆ ವ್ಯಾಪ್ತಿಗೆ 2021ರ ವೇಳೆಗೆ 4.7 ಕೋಟಿ ಮಹಿಳೆಯರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಶ್ಥೆ: ಕೋವಿಡ್-19 ಕಾರಣದಿಂದ ಉದ್ಭವಿಸಿರುವ ಪರಿಸ್ಥಿತಿಯು ಜಗತ್ತಿನಾದ್ಯಂತ 2021ರ ವೇಳೆಗೆ 4.7 ಕೋಟಿ ಮಹಿಳೆಯರು, ಬಾಲಕಿಯರನ್ನು ಕಡುಬಡತನದ ಸ್ಥಿತಿಗೆ ದೂಡಲಿದೆ ಎಂದು ವಿಶ್ವಸಂಶ್ಥೆ ಅಂದಾಜು ಮಾಡಿದೆ.

ಇವರನ್ನು ಬಡತನದ ರೇಖೆಯಿಂದ ಮತ್ತೆ ಮೇಲೆತ್ತಲು ದಶಕದಷ್ಟು ಅವಧಿಯ ಅಭಿವೃದ್ಧಿ ಬೇಕಾಗಬಹುದು ಎಂದು ವಿಶ್ವಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.

ವಿಶ್ವಸಂಸ್ಥೆಯ ಮಹಿಳೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ (ಯುಎನ್‌ಡಿಪಿ) ಕುರಿತ ವಿಶ್ಲೇಷಣೆಯಂತೆ, ಕಡು ಬಡತನದಲ್ಲಿರುವ ಮಹಿಳೆಯರು, ಬಾಲಕಿಯರ ಸಂಖ್ಯೆ ಹೆಚ್ಚಲಿದೆ. ಈ ವರ್ಗದ ಪುರುಷ ಮತ್ತು ಮಹಿಳೆ ನಡುವಿನ ಅಂತರವು ಮತ್ತಷ್ಟು ವೃದ್ಧಿಸಲಿದೆ ಎಂದಿದೆ.

ಕಡುಬಡತನದ ಮಹಿಳೆಯರ ಪ್ರಮಾಣ 2019 ಮತ್ತು 2021ರಲ್ಲಿ ಶೇ 2.7ರಷ್ಟು ಇಳಿಯಲಿದೆ ಎಂದು ಹಿಂದೆ ಅಂದಾಜಿಸಲಾಗಿತ್ತು. ಕೊರೊನಾ ಮತ್ತು ಆರ್ಥಿಕ ಕುಸಿತದ ಕಾರಣ ಹೊಸ ವಿಶ್ಲೇಷಣೆಯಂತೆ ಇದು ಈಗ 9.1ರಷ್ಟು ಏರಲಿದೆ.

ಕೊರೊನಾ ಸ್ಥಿತಿಯು ಜಗತ್ತಿನಾದ್ಯಂತ 2021 ವೇಳೆಗೆ 9.6 ಕೋಟಿ ಜನರನ್ನು ಕಡುಬಡತನದ ಸ್ಥಿತಿಗೆ ದೂಡಲಿದೆ. ಇವರಲ್ಲಿ 4.7 ಕೋಟಿ ಮಹಿಳೆಯರು, ಬಾಲಕಿಯರು ಎಂದು ವರದಿ ಹೇಳಿದೆ.

ಜಾಗತಿಕವಾಗಿಯೂ ಬಡತನದ ಸ್ಥಿತಿ ಮೇಲೆ ಈ ಬಿಕ್ಕಟ್ಟು ಪರಿಣಾಮ ಬೀರಲಿದೆ. ಇದರ ಹೆಚ್ಚಿನ ಪರಿಣಾಮ ಮಹಿಳೆಯರ ಮೇಲೆ ಮುಖ್ಯವಾಗಿ ವಯಸ್ಕ ಮಹಿಳೆಯರ ಮೇಲೆ ಆಗಲಿದೆ. 2021 ವೇಳೆಗೆ 25 ರಿಂದ 34 ವರ್ಷದ ಕಡುಬಡತನದಲ್ಲಿರುವ 100 ಪುರುಷರಿಗೆ ಹೋಲಿಸಿದರೆ, ಮಹಿಳೆಯರ ಸಂಖ್ಯೆ 118 ಆಗಿರಲಿದೆ. 2030ರ ವೇಳೆಗೆ ಈ ಸಂಖ್ಯೆ 121ಕ್ಕೆ ಏರಲಿದೆ ಎಂದಿದೆ.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಹೆಚ್ಚಿನ ಹೊಣೆಗಾರಿಕೆ ಹೊತ್ತುಕೊಳ್ಳುತ್ತಾರೆ. ಅವರು ಕಡಿಮೆ ಸಂಪಾದಿಸಲಿದ್ದು, ಕಡಿಮೆ ಉಳಿತಾಯ ಮಾಡುತ್ತಾರೆ. ಕಡಿಮೆ ಭದ್ರತೆಯ ಉದ್ಯೋಗ ನಿರ್ವಹಿಸುತ್ತಾರೆ. ಹೆಚ್ಚಿನದಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಉದ್ಯೋಗಾವಕಾಶಗಳು ಶೇ 19ರಷ್ಟು ಹೆಚ್ಚಿನ ಅಪಾಯ ಸ್ಥಿತಿ ಎದುರಿಸುತ್ತಿವೆ ಎಂದು ವಿಶ್ವಸಂಸ್ಥೆ ಮಹಿಳಾ ಕಾರ್ಯನಿರ್ವಾಹಕ ನಿರ್ದೇಶಕಾದ ಮ್ಲಾಂಬೊ ಗ್ಸುಕಾ ಅಭಿಪ್ರಾಯಪಟ್ಟರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು