ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂಘೈ: 20,472 ಹೊಸ ಕೋವಿಡ್ ಪ್ರಕರಣ

Last Updated 6 ಏಪ್ರಿಲ್ 2022, 19:33 IST
ಅಕ್ಷರ ಗಾತ್ರ

ಶಾಂಘೈ: ಚೀನಾದ ಅತಿದೊಡ್ಡ ನಗರ ಶಾಂಘೈನಲ್ಲಿ ಕೋವಿಡ್ ಪ್ರಕರಣಗಳು ಇನ್ನಷ್ಟು ಏರಿವೆ, ಬುಧವಾರ 20,472 ಹೊಸ ಪ್ರಕರಣ ದೃಢಪಟ್ಟಿವೆ. ಸತತ ಐದನೇ ದಿನ ದಾಖಲೆ ಪ್ರಮಾಣದಲ್ಲಿ ಪ್ರಕರಣಳು ಹೇರಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 94,000ಕ್ಕೆ ಏರಿದೆ.‍ಪ್ರಕರಣಗಳ ಏರಿಕೆ ಹಿಂದೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು, ಸಮುದಾಯ ಕೇಂದ್ರ
ವನ್ನು 40,000 ಜನರಿಗೆ ಚಿಕಿತ್ಸೆ ನೀಡುವಂತೆ ತಾತ್ಕಾಲಿಕ ಆಸ್ಪತ್ರೆಯಾಗಿ ಪರಿವರ್ತಿಸಿದ್ದಾರೆ.

ಚೀನಾದ ವುಹಾನ್‌ನಲ್ಲಿ ಫೆ. 12, 2020ರಂದು ದಾಖಲಾಗಿದ್ದ 13,436 ಇದುವರೆಗೆ ನಗರವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳಾಗಿದ್ದವು. ಪ್ರಕರಣಗಳ ತೀವ್ರ ಏರಿಕೆಯ ಹಿಂದೆಯೇ ಲಾಕ್‌ಡೌನ್‌ ನಿರ್ಬಂಧಗಳನ್ನು ಸರ್ಕಾರ ಬಿಗಿಗೊಳಿಸಿದೆ.

ದೃಢಪಡುತ್ತಿರುವ ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಲಕ್ಷಣರಹಿತವಾಗಿವೆ. ಕೋವಿಡ್‌ನಿಂದ ಹೊಸದಾಗಿ ಸಾವು ಸಂಭವಿಸಿಲ್ಲ. ಕಳೆದ ಎರಡು ವರ್ಗಗಳಲ್ಲಿ ಸೋಂಕಿನಿಂದ ಇಬ್ಬರು ಮಾತ್ರವೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಎರಡನೇ ವಾರದಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಸಾಮೂಹಿಕ ಆ್ಯಂಟಿಜೆನ್‌ ಪರೀಕ್ಷೆ ಮುಂದುವರಿದಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂಬ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಹಾಂಗ್‌ಕಾಂಗ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಶಾಂಘೈನ ಚಿಕಿತ್ಸೆ ಕೇಂದ್ರಗಳಲ್ಲಿ ಸೋಂಕು ದೃಢಪಟ್ಟವರ ಹಾಜರಾತಿ ಹೆಚ್ಚುತ್ತಿದೆ.ಈ ಮಧ್ಯೆ, ಸೋಂಕಿತ ಮಕ್ಕಳು ಪೋಷಕರಿಂದ ಪ್ರತ್ಯೇಕವಾಗಿ ಇರಬೇಕು ಎಂಬ ನಿಯಮವನ್ನು ಚೀನಾ ಸರ್ಕಾರ ಕೈಬಿಟ್ಟಿದೆ. ಸುಮಾರು 2.6 ಕೋಟಿ ಜನರಿರುವ ಶಾಂಘೈ ನಗರದಲ್ಲಿ ಬಿಗಿ ನಿರ್ಬಂಧದಿಂದಾಗಿ ಜನರ ಜೀವನ ಶೈಲಿಯು ಏರುಪೇರಾಗಿದೆ. ಆರ್ಥಿಕ ಚಟುವಟಿಕೆ ಕೇಂದ್ರ ಶಾಂಘೈ, ಸೋಂಕು ಪರಿಸ್ಥಿತಿ ಎದುರಿಸಲು ಸಜ್ಜಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಬಂಧ ಕ್ರಮಗಳು ಆರ್ಥಿಕತೆ ಮೇಲೆ ಪರಿಣಾಮ ಬೀರಲಿವೆ. ಮುಖ್ಯವಾಗಿ ಸಣ್ಣ ಉದ್ದಿಮೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಚೀನಾದಲ್ಲಿ ಸುಮಾರು 20 ಕೋಟಿಗೂ ಅಧಿಕ ಜನರು ಲಾಕ್‌ಡೌನ್‌ನಲ್ಲಿ ಇದ್ದಾರೆ ಎಂದು ನೊಮುರಾ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT