ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಲಸಿಕೆ ತಯಾರಕರು, ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದವನ್ನು ನಿಲ್ಲಿಸಿ'

Last Updated 9 ಜನವರಿ 2021, 2:14 IST
ಅಕ್ಷರ ಗಾತ್ರ

ಜಿನಿವಾ: ಕೋವಿಡ್-19 ಲಸಿಕೆ ತಯಾರಕರು ಮತ್ತು ಅವುಗಳನ್ನು ಖರೀದಿಸುವ ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ.

ಇದರಿಂದ 'ಕೊವಾಕ್ಸ್' ಯೋಜನೆ ಮೂಲಕ ಬಡ ರಾಷ್ಟ್ರಗಳಿಗೂ ಸರಿಸಮ ಹಾಗೂ ವ್ಯಾಪಕವಾಗಿ ಲಂಚಿಕೆ ಹಂಚುವ ವಿಶಸಂಸ್ಥೆಯ ಪ್ರಯತ್ನಗಳಿಗೆ ಹಿನ್ನೆಡೆಯುಂಟಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಮಾಹಿತಿ ನೀಡಿದರು.

ಕೊವಾಕ್ಸ್ ಯೋಜನೆಯಡಿ ಹಿಂದುಳಿದ ಸೇರಿದಂತೆ ಎಲ್ಲ ರಾಷ್ಟ್ರಗಳಿಗೂ ಸಮಾನವಾಗಿ ಲಸಿಕೆ ತಲುಪಿಸುವ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದೆ.

ಶ್ರೀಮಂತ ಹಾಗೂ ಮಧ್ಯಮ ಆದಾಯದ ಸೇರಿದಂತೆ 42 ದೇಶಗಳು ಇಂತಹ ಲಸಿಕೆಗಳನ್ನು ಹೊರತರುತ್ತಿವೆ. ಆದರೆ ಲಸಿಕೆಗಳನ್ನು ಸಮಾನವಾಗಿ ಹಂಚಲು ಕೊವಾಕ್ಸ್ ಯೋಜನೆಗೆ ಲಭ್ಯವಾಗುವಂತೆ ಮಾಡಬೇಕಾಗಿರುವುದರಿಂದ ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದವನ್ನು ನಿಲ್ಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ತಿಳಿಸಿದರು.

ನಾವೀಗ ಕೊವಾಕ್ಸ್‌ನ ಭಾಗವಾಗಿರುವ ಶ್ರೀಮಂತ ಹಾಗೂ ಮಧ್ಯಮ ಆದಾಯದ ದೇಶಗಳು ದ್ವಿಪಕ್ಷೀಯ ಒಪ್ಪಂದವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದರಿಂದ ಬೆಲೆ ಹೆಚ್ಚಳವಾಗಲಿದ್ದು, ಬಡ ಮತ್ತು ಬೇಡಿಕೆಯ ಜನರಿಗೆ ಲಸಿಕೆ ಸಿಗಲಾರದು. ಹಾಗಾಗಿ ಕೊವಾಕ್ಸ್ ವೆಚ್ಚದಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡುವುದನ್ನು ನಿಲ್ಲಿಸುವಂತೆ ನಾನು ಶ್ರೀಮಂತ ದೇಶಗಳು ಹಾಗೂ ಔಷದಿ ತಯಾರಕರಿಗೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಲಸಿಕೆ ತಯಾರಕರು ತಮ್ಮ ಲಸಿಕೆಗಳ ಡೇಟಾವನ್ನು ಲಭ್ಯವಾಗುವಂತೆ ಮಾಡಲು ಟ್ರೆಡೋಸ್ ಒತ್ತಾಯಿಸಿದರು. ಇದರಿಂದ ತುರ್ತು ಬಳಕೆಯ ಪಟ್ಟಿಗಳನ್ನು ಒದಗಿಸಲು ನೆರವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT