ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ತೀವ್ರ ಸೋಂಕಿನಿಂದ ರಕ್ಷಣೆ

ಲ್ಯಾನ್ಸೆಟ್‌ ಅಧ್ಯಯನ ವರದಿಯಲ್ಲಿ ಬಹಿರಂಗ
Last Updated 1 ಜುಲೈ 2022, 12:34 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ):ಕೋವಿಡ್‌ ಲಸಿಕೆಯು ಮಾನವನ ದೇಹದ ಗಾತ್ರವನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನೂ ಸೋಂಕಿನಿಂದ ರಕ್ಷಿಸಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಲಂಡನ್‌ನ ಲ್ಯಾನ್ಸೆಟ್ ಡಯಾಬಿಟಿಸ್ ಆ್ಯಂಡ್‌ ಎಂಡೋಕ್ರಿನೊಲೊಜಿಯಲ್ಲಿ ಈ ಸಮೀಕ್ಷೆ ಪ್ರಕಟವಾಗಿದೆ.

ಅತಿ ಹೆಚ್ಚು ತೂಕ ಹೊಂದಿರುವವರು ಮತ್ತು ಆರೋಗ್ಯಕರ ತೂಕ ಹೊಂದಿರುವವರಲ್ಲಿ ಲಸಿಕೆಯು ಸಮಾನವಾಗಿ ಪರಿಣಾಮಕಾರಿಯಾಗಿದೆ ಎಂದು ಹೇಳಬಹುದು. ಆದರೆ, ಎರಡನ್ನೂ ಹೋಲಿಸಿದರೆ ಕಡಿಮೆ ತೂಕದ ವ್ಯಕ್ತಿಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಲಸಿಕೆ ಪಡೆದವರ ಪೈಕಿ ಅತಿ ಕಡಿಮೆ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಆರೋಗ್ಯಕರ ತೂಕ ಹೊಂದಿದವರಿಗಿಂತ ಅತಿ ಕಡಿಮೆ ಮತ್ತು ಅತಿ ಹೆಚ್ಚು ತೂಕ ಹೊಂದಿದವರೇ ಹೆಚ್ಚಾಗಿ ಗಂಭೀರ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟಾರೆ ಕೋವಿಡ್ ಲಸಿಕೆಯು ಎಲ್ಲಾ ಗಾತ್ರದ ಜನರನ್ನು ಸೋಂಕಿನಿಂದ ರಕ್ಷಿಸಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡಿನ 1.2 ಕೋಟಿ ರೋಗಿಗಳ ಆರೋಗ್ಯ ದಾಖಲೆ ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT