ಭಾನುವಾರ, ಏಪ್ರಿಲ್ 11, 2021
22 °C

ಭಾರತ ಲಸಿಕೆ ತಯಾರಿಸಿ ಕೋವಿಡ್‌ನಿಂದ ವಿಶ್ವವನ್ನು ಪಾರು ಮಾಡಿದೆ -ಅಮೆರಿಕ ವಿಜ್ಞಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ‘ಕೋವಿಡ್‌–19 ಲಸಿಕೆಗಳನ್ನು ಅಭಿವೃದ್ಧಿಪಡಿಸಿರುವ ಭಾರತ, ಮಾರಕ ಕೊರೊನಾ ವೈರಸ್‌ನಿಂದ ವಿಶ್ವವನ್ನು ಪಾರು ಮಾಡಿದೆ. ಈ ನಿಟ್ಟಿನಲ್ಲಿ ಭಾರತದ ಕೊಡುಗೆಯನ್ನು ಕಡೆಗಣಿಸಬಾರದು’ ಎಂದು ಅಮೆರಿಕದ ಖ್ಯಾತ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಇಲ್ಲಿನ ಬೇಲರ್‌ ಕಾಲೇಜ್‌ ಆಫ್‌ ಮೆಡಿಸಿನ್‌ನ ನ್ಯಾಷನಲ್‌ ಸ್ಕೂಲ್‌ ಆಫ್‌ ಟ್ರಾಪಿಕಲ್‌ ಮೆಡಿಸಿನ್‌ನ ಡೀನ್‌ ಆಗಿರುವ ಡಾ.ಪೀಟರ್‌ ಹೋಟೆಜ್‌ ವೆಬಿನಾರ್‌ವೊಂದರಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಭಾರತ ಎರಡು ಲಸಿಕೆಗಳನ್ನು ಕೊಡುಗೆಯಾಗಿ ನೀಡಿದೆ. ಈ ಪಿಡುಗಿನ ವಿರುದ್ಧ ಹೋರಾಡಲು ಭಾರತ ನಡೆಸಿರುವ ಪ್ರಯತ್ನ ಅಗಾಧವಾದುದು’ ಎಂದೂ ಅವರು ಶ್ಲಾಘಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು