ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಲಸಿಕೆ ಅಭಿಯಾನದಲ್ಲಿ ಭಾರತವೇ ಮುಂದು

Last Updated 11 ಫೆಬ್ರುವರಿ 2021, 10:21 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಪ್ರಪಂಚದಾದ್ಯಂತಬುಧವಾರ ಒಂದೇ ದಿನ ಒಟ್ಟು 4,37,929 ಜನರಿಗೆಕೋವಿಡ್-19 ಸೋಂಕು ತಗುಲಿದ್ದು, ಇದೇ ವೇಳೆ 14,075 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 78 ಲಕ್ಷ ದಾಟಿದ್ದು ಸಾವಿನ ಸಂಖ್ಯೆ 23 ಲಕ್ಷದ 63ಸಾವಿರಕ್ಕೆ ತಲುಪಿದೆ ಎಂದುವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಅತಿಹೆಚ್ಚು ಸೋಂಕು (2 ಕೋಟಿ 78ಲಕ್ಷ) ಹಾಗೂ ಸಾವಿನ (4 ಲಕ್ಷ 83 ಸಾವಿರ)ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಕಳೆದ 24 ಗಂಟೆ ಅವಧಿಗಳಲ್ಲಿ96 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ಬ್ರೆಜಿಲ್‌ನಲ್ಲಿ 60 ಸಾವಿರ, ಫ್ರಾನ್ಸ್‌ನಲ್ಲಿ 25 ಸಾವಿರ ಮತ್ತು ಸ್ಪೇನ್‌ನಲ್ಲಿ 18 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ.

ಲಸಿಕೆ ಅಭಿಯಾನ; ಭಾರತವೇ ಮುಂದು
ಭಾರತದಲ್ಲಿ ಕೋವಿಡ್-19ಲಸಿಕೆ ಅಭಿಯಾನ ಆರಂಭಿಸಿದ ಕೇವಲ 26 ದಿನಗಳಲ್ಲೇ70 ಲಕ್ಷ‌ ಜನರಿಗೆ ಲಸಿಕೆ ಹಾಕಲಾಗಿದೆ. ಆ ಮೂಲಕ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ರಾಷ್ಟ್ರವೆಂಬ ಹೆಗ್ಗಳಿಕೆ ಭಾರತದ್ದಾಗಿದೆ.ಇಷ್ಟೇ ಸಂಖ್ಯೆಯ ಜನರಿಗೆ ಲಸಿಕೆ ಹಾಕಲು ಅಮೆರಿಕದಲ್ಲಿ 27 ದಿನಗಳು ಮತ್ತು ಇಂಗ್ಲೆಂಡ್‌ನಲ್ಲಿ 48 ದಿನಗಳನ್ನು ತೆಗೆದುಕೊಳ್ಳಲಾಗಿತ್ತು.

ಇಂದು ಬೆಳಗ್ಗೆ 8ರ ವರೆಗೆ 57,05,228 ಆರೋಗ್ಯ ಕಾರ್ಯಕರ್ತರು, 13,11,886 ಸ್ವಯಂ ಸೇವಕರೂ ಸೇರಿದಂತೆ ಒಟ್ಟು 70,17,114 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಇದುವರೆಗೆ ಒಟ್ಟು1.08 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ1.05 ಸೋಂಕಿತರು ಗುಣಮುಖರಾಗಿದ್ದು, 1.55 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ 1.44 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

ಉದ್ಯೋಗ ಕಡಿತಕ್ಕೆ ಮುಂದಾಗಿ ಹೈನೆಕೆನ್ ಎನ್‌ವಿ
ಕೋವಿಡ್-19 ಸಾಂಕ್ರಾಮಿಕದಿಂದ ಹೇರಲಾದ ಲಾಕ್‌ಡೌನ್‌ ವೇಳೆ ನಷ್ಟಕ್ಕೆ ಸಿಲುಕಿರುವಬಿಯರ್‌ ತಯಾರಿಕಾ ಕಂಪೆನಿ ಹೈನೆಕೆನ್ ಎನ್‌ವಿ ಸುಮಾರು8,000 ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT