ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: 13 ಕೋಟಿ ದಾಟಿದ ಕೋವಿಡ್-‌19 ಸೋಂಕಿತರ ಸಂಖ್ಯೆ

Last Updated 2 ಏಪ್ರಿಲ್ 2021, 6:15 IST
ಅಕ್ಷರ ಗಾತ್ರ

ನ್ಯೂಯಾರ್ಕ್‌:ಪ್ರಪಂಚದಾದ್ಯಂತಗುರುವಾರಒಂದೇ ದಿನ ಬರೋಬ್ಬರಿ 6,86,498 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 11,522 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 13ಕೋಟಿಗೆ(13,01,57,191) ಏರಿಕೆಯಾಗಿದ್ದು, ಸಾವಿನ ಸಂಖ್ಯೆ28.39 ಲಕ್ಷಕ್ಕೆ ತಲುಪಿದೆ ಎಂದು ವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾದರಾಷ್ಟ್ರಗಳ ಸಾಲಿನಲ್ಲಿ ಮೊದಲ ಎರಡುಸ್ಥಾನಗಳಲ್ಲಿರುವ ಅಮೆರಿಕಹಾಗೂ ಬ್ರೆಜಿಲ್‌ನಲ್ಲಿಗುರುವಾರ ಕ್ರಮವಾಗಿ 76,786 ಮತ್ತು89,459ಪ್ರಕರಣಗಳು ಪತ್ತೆಯಾಗಿವೆ.

ಅಮೆರಿಕದಲ್ಲಿ 5.66 ಲಕ್ಷ ಸೋಂಕಿತರು ಸಾವು
ಹೆಚ್ಚು ಪ್ರಕಣಗಳನ್ನು ಹೊಂದಿರುವ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 952 ಸಾವಿನ ಪ್ರಕರಣಗಳು ವರದಿಯಾಗಿರುವುದೂ ಸೇರಿ ಈವರೆಗೆ ಒಟ್ಟು5,66,611 ಸೋಂಕಿತರು ಮೃತಪಟ್ಟಿದ್ದಾರೆ.ಇದೇ ವೇಳೆಬ್ರೆಜಿಲ್‌ನಲ್ಲಿ3,673 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ3,25,559ಕ್ಕೆ ತಲುಪಿದೆ.

ಉಳಿದಂತೆ, ಮೆಕ್ಸಿಕೊ (2.03 ಲಕ್ಷ), ಇಂಗ್ಲೆಂಡ್‌ (1.26ಲಕ್ಷ) ಮತ್ತು ಇಟಲಿಯಲ್ಲಿ (1.09 ಲಕ್ಷ) ಒಂದು ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ.

ಅಮೆರಿಕ-ಫ್ರಾನ್ಸ್‌ನಲ್ಲಿಜಗತ್ತಿನ ಅರ್ಧದಷ್ಟು ಸಕ್ರಿಯ ಪ್ರಕರಣಗಳು
ವರ್ಲ್ಡೋಮೀಟರ್‌ ಮಾಹಿತಿ ಪ್ರಕಾರ ಜಗತ್ತಿನದಾದ್ಯಂತ ವರದಿಯಾಗಿರುವ ಒಟ್ಟು 13 ಕೋಟಿ ಪ್ರಕರಣಗಳ ಪೈಕಿ, ಈವರೆಗೆ ಒಟ್ಟು10.4 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. 28 ಲಕ್ಷದ 39 ಸಾವಿರ ಮಂದಿ ಮೃತಪಟ್ಟಿದ್ದು, ಇನ್ನೂ2.24 ಕೋಟಿಗೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ.

3.1 ಕೋಟಿ ಪ್ರಕರಣಗಳನ್ನು ಹೊಂದಿರುವ ಅಮೆರಿದಲ್ಲಿ2ಕೋಟಿ 37 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ, ಇನ್ನೂ 69 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. 46.95 ಲಕ್ಷ ಪ್ರಕರಣಗಳನ್ನು ಹೊಂದಿರುವ ಫ್ರಾನ್ಸ್‌ನಲ್ಲಿ 43 ಲಕ್ಷ ಪ್ರಕಣಗಳು ಸಕ್ರಿಯವಾಗಿವೆ. ಹೀಗಾಗಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಅರ್ಧದಷ್ಟುಈ ಎರಡೇ ದೇಶಗಳಲ್ಲಿವೆ.

1.28ಕೋಟಿ ಸೋಂಕು ಪ್ರಕರಣಗಳು ದಾಖಲಾಗಿರುವ ಬ್ರೆಜಿಲ್‌ನಲ್ಲಿ12.78 ಲಕ್ಷ, ಬೆಲ್ಜಿಯಂನಲ್ಲಿ 8.02 ಲಕ್ಷ, ಇಟಲಿಯಲ್ಲಿ 5.63 ಲಕ್ಷ,ಪೋಲ್ಯಾಂಡ್‌ನಲ್ಲಿ 4.21 ಲಕ್ಷ, ಇಂಗ್ಲೆಂಡ್‌ನಲ್ಲಿ 3.63 ಲಕ್ಷ, ಉಕ್ರೇನ್‌ನಲ್ಲಿ 3.35 ಲಕ್ಷ,ಟರ್ಕಿಯಲ್ಲಿ2.91 ಲಕ್ಷ, ರಷ್ಯಾದಲ್ಲಿ 2.78 ಲಕ್ಷ,ಮೆಕ್ಸಿಕೊದಲ್ಲಿ 2.62 ಲಕ್ಷ, ಜರ್ಮನಿಯಲ್ಲಿ2.41,ಲಕ್ಷ ಹಂಗೇರಿಯಲ್ಲಿ2.30,ಇರಾನ್‌ನಲ್ಲಿ2.08 ಲಕ್ಷ,ಐರ್ಲ್ಯಾಂಡ್‌ನಲ್ಲಿ2.08 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ಭಾರತದ ಅಂಕಿ-ಅಂಶ
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 81,466 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 469 ಸೋಂಕಿತರು ಮೃತಪಟ್ಟಿದ್ದಾರೆ ಮತ್ತು 50,356 ಸೋಂಕಿತರು ಗುಣಮುಖರಾಗಿದ್ದಾರೆ.

ದೇಶದಲ್ಲಿ ಈವರೆಗೆ ಒಟ್ಟು 1,23,03,131 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,63,396 ಮಂದಿ ಸಾವಿಗೀಡಾಗಿದ್ದಾರೆ.

ಈವರೆಗೆ ಒಟ್ಟು 1,15,25,039 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 6,14,696 ಸಕ್ರಿಯ ಪ್ರಕರಣಗಳಿವೆ. ಈವರೆಗೆ 6.87 (6,87,89,138) ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT