ಸೋಮವಾರ, ಮಾರ್ಚ್ 27, 2023
28 °C

Covid-19 World Update: ಬ್ರೆಜಿಲ್‌ನಲ್ಲಿ 40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 43,773 ಕೋವಿಡ್‌–19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 40,41,638ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದೇವೇಳೆ 834 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,24,614ಕ್ಕೆ ತಲುಪಿದೆ. ಒಟ್ಟು 32,47,610 ಸೋಂಕಿತರು ಗುಣಮುಖರಾಗಿದ್ದಾರೆ.

ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 61,49,516 ಜನರಿಗೆ ಸೋಂಕು ತಗುಲಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್–19 ಸೋಂಕನ್ನು ಜಾಗತಿಕ ಪಿಡುಗು ಎಂದು ಮಾರ್ಚ್‌ 11ರಂದು ಘೋಷಿಸಿತ್ತು.

ಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,63,04,856 ಪ್ರಕರಣಗಳು ವರದಿಯಾಗಿದ್ದು, 8,68,733 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯವು ವರದಿ ಮಾಡಿದೆ.

ರಷ್ಯಾದಲ್ಲಿ 1,006,923, ಪೆರುವಿನಲ್ಲಿ 6,57,129, ಕೊಲಂಬಿಯಾದಲ್ಲಿ 6,41,574, ದಕ್ಷಿಣ ಆಫ್ರಿಕಾದಲ್ಲಿ 6,33,015 ಮತ್ತು ಮೆಕ್ಸಿಕೊದಲ್ಲಿ 616,894 ಪ್ರಕರಣಗಳು ವರದಿಯಾಗಿವೆ.

ಮೆಕ್ಸಿಕೊದಲ್ಲಿ 66,329, ಇಂಗ್ಲೆಂಡ್‌ನಲ್ಲಿ 41,616, ಇಟಲಿಯಲ್ಲಿ 35,507, ಫ್ರಾನ್ಸ್‌ನಲ್ಲಿ 30,712, ಸ್ಪೇನ್‌ನಲ್ಲಿ 29,234, ಪೆರುವಿನಲ್ಲಿ 29,068 ಮತ್ತು ಇರಾನ್‌ನಲ್ಲಿ 21,926 ಸೋಂಕಿತರು ಮೃತಪಟ್ಟಿದ್ದಾರೆ.

ಕೋವಿಡ್–19 ಮಾರಕ ರೋಗವೇನಲ್ಲ: ಸಿಂಗಾಪುರ ಪ್ರಧಾನಿ
ಕೋವಿಡ್–19 ಸಾಂಕ್ರಾಮಿಕವು ಜಾಗತಿಕ ಮಟ್ಟದಲ್ಲಿ ಸಂಭವಿಸಿರುವ ವಿಪತ್ತು ಆಗಿದೆ. ಆದರೆ, ಇದು ಮಾನವಕುಲಕ್ಕೆ ಮಾರಕರೋಗವಲ್ಲ. ಈ ತುರ್ತು ಸಮಯದಲ್ಲಿ ಕಲಿತ ಪಾಠಗಳನ್ನು ಭವಿಷ್ಯದ ಸಾಂಕ್ರಾಮಿಕ ರೋಗಗಳ ಸಂದರ್ಭಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಂಗಾಪುರ ಪ್ರಧಾನಿ ಲೀ ಹ್ಸಿಯೆನ್‌ ಲೂಂಗ್‌ ಅವರು ಹೇಳಿದ್ದಾರೆ.

ಭಾರತದಲ್ಲಿ 40 ಲಕ್ಷದತ್ತ ಸಾಗಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಈವರೆಗೆ 39,36,748 ಮಂದಿಗೆ ಸೋಂಕು ತಗುಲಿದ್ದು, 68,472 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

30,37,152 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇನ್ನೂ 8,31,124 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು