ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 world update: 2.39 ಕೋಟಿ ಸೋಂಕಿತರು, ಪರೀಕ್ಷೆ ಕಡಿಮೆ ಮಾಡಿದ ಜರ್ಮನಿ

Last Updated 26 ಆಗಸ್ಟ್ 2020, 15:31 IST
ಅಕ್ಷರ ಗಾತ್ರ

ಲಂಡನ್‌:ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯ ಎಲ್ಲ ಮಾದರಿಯ ಕೊರೊನಾ ವೈರಸ್‌ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಬ್ರಿಟನ್‌ ಸರ್ಕಾರ ಬುಧವಾರ ತಿಳಿಸಿದೆ.

ಈ ಲಸಿಕೆ ಕೋವಿಡ್–19ಗೆ ಮಾತ್ರವಲ್ಲದೇ ಎಲ್ಲಾ ಮಾದರಿಯ ಕೊರೊನಾ ವೈರಸ್‌ ಸೋಂಕಿಗೂ ಪರಿಣಾಮಕಾರಿ ಎಂದು ಬ್ರಿಟನ್‌ ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ಪ್ರಾಣಿಗಳ ಮೇಲಿನ ಪರೀಕ್ಷೆ ಯಶಸ್ವಿಯಾಗಿದ್ದು, ಮುಂದಿನ ವಾರದಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ವಿಜ್ಞಾಣಿಗಳು ಖಚಿತ ಪಡಿಸಿದ್ದಾರೆ.

ಜಾಗತಿಕವಾಗಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಜರ್ಮನಿ ಪ್ರಯಾಣದ ಹಿನ್ನೆಲೆ ಇರುವವರ ಕಡ್ಡಾಯ ಕೋವಿಡ್‌ ಪರೀಕ್ಷೆಯನ್ನು ವಾಪಾಸು ಪಡೆದಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಸೋಂಕು ಹೆಚ್ಚುತ್ತಿದ್ದು ಒಂದೇ ದಿನ 24 ಜನರು ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಒಟ್ಟು 2.39ಕೋಟಿ ಸೋಂಕಿತರು

ಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,39,36,026 ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,56,15,139 ಸೋಂಕಿತರು ಗುಣಮುಖರಾಗಿದ್ದಾರೆ. 8,20,438 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 57,81,834 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 20,53,699 ಸೋಂಕಿತರು ಗುಣಮುಖರಾಗಿದ್ದು, 1,78,578 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ನಂತರ ಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 36,69,995 ಪ್ರಕರಣಗಳು ಬೆಳಕಿಗೆ ಬಂದಿವೆ. 30,32,551 ಸೋಂಕಿತರು ಗುಣಮುಖರಾಗಿದ್ದು1,16,580 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ..
ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 67,151 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 1,059 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 32,34,475ಕ್ಕೆ ಏರಿಕೆಯಾಗಿದ್ದು, 24,67,759 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 59,449 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿ 7,07,267 ಸಕ್ರಿಯ ಪ್ರಕರಣಗಳು ಇವೆ.

ಸೋಂಕಿನ ತೀವ್ರತೆ ಪಟ್ಟಿಯಲ್ಲಿ ಜಾಗತಿಕವಾಗಿಭಾರತ ಮೂರನೇ ಸ್ಥಾನದಲ್ಲಿದೆ.

ರಷ್ಯಾದಲ್ಲಿ 9,68,297, ದಕ್ಷಿಣ ಆಫ್ರಿಕಾದಲ್ಲಿ 6,13,017, ಪೆರುವಿನಲ್ಲಿ 6,00,438, ಮೆಕ್ಸಿಕೋದಲ್ಲಿ 5,68,621 ಸ್ಪೇನ್‌ನಲ್ಲಿ 4,12,553, ಚಿಲಿಯಲ್ಲಿ 4,00,985, ಇಂಗ್ಲೆಂಡ್‌ನಲ್ಲಿ 3,29,883 ಪ್ರಕರಣಗಳು ವರದಿಯಾಗಿವೆ.

ಜಗತ್ತಿನಲ್ಲೇ ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಈವರೆಗೆ 89,738 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 4,711 ಸೋಂಕಿತರು ಮೃತಪಟ್ಟಿದ್ದು, 84,058 ಗುಣಮುಖರಾಗಿದ್ದಾರೆ. ಇನ್ನು ಕೇವಲ 969 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT