ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಹೊಸ ಲಸಿಕೆಯಿಂದ ಬೇಗನೇ ಚೇತರಿಕೆ ಸಾಧ್ಯ

Last Updated 8 ಫೆಬ್ರುವರಿ 2021, 15:46 IST
ಅಕ್ಷರ ಗಾತ್ರ

ಟೊರಂಟೊ: ಹೊಸತಾದ ವೈಜ್ಞಾನಿಕ ಪರೀಕ್ಷೆಯಲ್ಲಿ ಕೋವಿಡ್-19 ಪಿಡುಗಿನಿಂದ ರೋಗಿಗಳು ಬೇಗನೇ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಟೊರಂಟೊ ಮೂಲದ ವಿಜ್ಞಾನಿಗಳು ತಿಳಿಸಿದ್ದಾರೆ.

ವೈಜ್ಞಾನಿಕ ಪ್ರಯೋಗದ ಹಂತದಲ್ಲಿರುವ ಲಸಿಕೆಯು ಹೆಚ್ಚು ಪರಿಣಾಮಕಾರಿಯೆನಿಸಿಕೊಳ್ಳಲಿದ್ದು, ರೋಗಿಗಳು ಆಸ್ಪತ್ರೆಗೂ ಹೋಗುವ ಅಗತ್ಯವಿರುವುದಿಲ್ಲ ಎಂದು ಹೇಳಿದೆ.

ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಪೆಜಿಂಟರ್ಫೆರಾನ್-ಲಾಂಬ್ಡಾ (peginterferon-lambda) ಚುಚ್ಚು ಮದ್ದು ಪಡೆದ ರೋಗಿಗಳು ಏಳು ದಿನಗಳಲ್ಲಿ ರೋಗಮುಕ್ತಿ ಹೊಂದುತ್ತಾರೆ ಎಂದು ಹೇಳಲಾಗಿದೆ.

ವರ್ಲ್ಡೋಮೀಟರ್ ಪ್ರಕಾರ, ಫೆಬ್ರವರಿ 8ರ ವೇಳೆಗೆ ಜಗತ್ತಿನಾದ್ಯಂತ ಒಟ್ಟು 106,781,473 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಈ ಪೈಕಿ 2,329,275 ಮಂದಿ ಮೃತಪಟ್ಟಿದ್ದಾರೆ.

ಏತನ್ಮಧ್ಯೆ ಇದುವರೆಗೆ 78,478,825 ಮಂದಿ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಹಾಗೆಯೇ 25,827,257 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ ಒಟ್ಟು 27,613,713 ಪ್ರಕರಣಗಳು ದಾಖಲಾಗಿದೆ. ಈ ಪೈಕಿ 2310 ಹೊಸ ಪ್ರಕರಣ ದಾಖಲಾಗಿದೆ.

ಇನ್ನು ಭಾರತದಲ್ಲಿ 10,846,028, ಬ್ರೆಜಿಲ್‌ನಲ್ಲಿ 9,524,640, ರಷ್ಯಾದಲ್ಲಿ 3,983,197, ಬ್ರಿಟನ್‌ನಲ್ಲಿ 3,945,680 ಹಾಗೂ ಫ್ರಾನ್ಸ್‌ನಲ್ಲಿ 3,337,048 ಪ್ರಕರಣಗಳು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT