ಶುಕ್ರವಾರ, ಡಿಸೆಂಬರ್ 4, 2020
24 °C

Covid-19 World Update: ವಿಶ್ವದಾದ್ಯಂತ 1.5 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Covid-19

ವಾಷಿಂಗ್ಟನ್‌: ವಿಶ್ವದಾದ್ಯಂತ ಈವರೆಗೆ 5.59 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 13 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 3.89 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂಬುದು ವರ್ಲ್ಡೊ ಮೀಟರ್ ಕೊವಿಡ್ ಟ್ರ್ಯಾಕರ್ ಅಂಕಿಅಂಶಗಳಿಂದ ತಿಳಿದುಬಂದಿದೆ.

ಅತಿಹೆಚ್ಚು ಮಂದಿ ಸೋಂಕಿತರಾಗಿರುವ ಅಮೆರಿಕದಲ್ಲಿ ಈವರೆಗೆ 1.1 ಕೋಟಿಗೂ ಹೆಚ್ಚು ಜನ ಸೋಂಕಿಗೀಡಾಗಿದ್ದಾರೆ. 2.54 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70.87 ಲಕ್ಷಕ್ಕೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ಸುಮಾರು 43.53 ಸಕ್ರಿಯ ಪ್ರಕರಣಗಳಿವೆ.

ಜೋರ್ಡಾನ್‌ನಲ್ಲಿ ಒಂದೇ ದಿನ 6,454 ಪ್ರಕರಣಗಳು ದೃಡಪಟ್ಟಿದ್ದು, 66 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಅಲ್ಲಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 1,55,993ಕ್ಕೆ ಏರಿಕೆಯಾಗಿದ್ದು, 1,909 ಮಂದಿ ಅಸುನೀಗಿದ್ದಾರೆ.

ಪಾಕಿಸ್ತಾನದಲ್ಲಿ ಒಂದೇ ದಿನ 2,298 ಮಂದಿ ಸೋಂಕಿತರಾಗಿದ್ದು, 37 ಸಾವು ಸಂಭವಿಸಿದೆ. ಅಲ್ಲಿ ಈವರೆಗೆ 3.63 ಲಕ್ಷಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು, 7,230 ಸಾವು ಸಂಭವಿಸಿದೆ. ಸದ್ಯ 30,362 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ 4,48,660, ಬ್ರೆಜಿಲ್‌ನಲ್ಲಿ 3,83,423, ಫ್ರಾನ್ಸ್‌ನಲ್ಲಿ 18,47,330, ರಷ್ಯಾದಲ್ಲಿ 4,61,178 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು