ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | 4.26 ಕೋಟಿ ಜನರಿಗೆ ಸೋಂಕು, 11,51,137 ಜನ ಸಾವು

Last Updated 24 ಅಕ್ಟೋಬರ್ 2020, 14:52 IST
ಅಕ್ಷರ ಗಾತ್ರ
ADVERTISEMENT
""

ರಿಯೊ ಡಿ ಜನೈರೊ(ಬ್ರೆಜಿಲ್‌): ಜಗತ್ತಿನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 4.26 (4,26,12,362) ಕೋಟಿ ಮೀರಿದೆ. ಈವರೆಗೂ ಸೋಂಕಿನಿಂದ 11,51,137 ಮಂದಿ ಮೃತಪಟ್ಟಿದ್ದಾರೆ.

ವಿಶ್ವದಲ್ಲಿ ಒಟ್ಟಾರೆ 3,15,01,294 ಜನರು ಗುಣಮುಖರಾಗಿದ್ದಾರೆ ಹಾಗೂ 99,59,931 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ಕೋವಿಡ್‌ ಟ್ರ್ಯಾಕರ್‌ ವರ್ಲ್ಡೋಮೀಟರ್‌ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಬ್ರೆಜಿಲ್‌ನಲ್ಲಿ ಒಟ್ಟು 53,55,650 ಕೋವಿಡ್‌ ಪ್ರಕರಣಗಳಿದ್ದು, ಅಲ್ಲಿ 1,56,528 ಮಂದಿ ಮೃತಪಟ್ಟಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅದು ಮೂರನೇ ಸ್ಥಾನದಲ್ಲಿದೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ ಒಟ್ಟು 87,57,002 ಮಂದಿಗೆ ಸೋಂಕು ತಗುಲಿದ್ದರೆ, 2,29,376 ಮಂದಿ ಈವರೆಗೆ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಎರಡನೇ ರಾಷ್ಟ್ರ ಭಾರತವಾಗಿದ್ದು, ಇಲ್ಲಿ, ಈವರೆಗೆ 78,24,157 ಮಂದಿಗೆ ಸೋಂಕು ತಗುಲಿದೆ. 1,18,167 ಮಂದಿ ಮೃತಪಟ್ಟಿದ್ದಾರೆ.

ಇನ್ನುಳಿದಂತೆ ರಷ್ಯಾದಲ್ಲಿ 14,97,167 ಪ್ರಕರಣಗಳು, 25,821 ಮಂದಿ ಮೃತಪಟ್ಟಿದ್ದಾರೆ.ಕೊಲಂಬಿಯಾದಲ್ಲಿ 9,98,942 ಪ್ರಕರಣಗಳು ಹಾಗೂ 29,802 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT