ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ನಾರ್ವೆ ಪ್ರಯಾಣಿಕರಿಗೆ ನಿಷೇಧ ಹೇರಿದ ಸ್ವೀಡನ್

Last Updated 24 ಜನವರಿ 2021, 17:03 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್: ನಾರ್ವೆಯಲ್ಲಿ ರೂಪಾಂತರ ಕೊರೊನಾವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಅಲ್ಲಿನ ಪ್ರಯಾಣಿಕರು ದೇಶಕ್ಕೆ ಪ್ರಯಾಣಿಸದಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಸ್ವೀಡನ್‌ ತಿಳಿಸಿದೆ.

ನಾರ್ವೆಯಲ್ಲಿ ರೂಪಾಂತರ ವೈರಸ್‌ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಲ್ಲಿನ ಸಾಕಷ್ಟು ನಗರಸಭೆಗಳಲ್ಲಿ ಏಕಾಏಕಿ ಕಠಿಣ ಲಾಕ್‌ಡೌನ್‌ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಬೆಳವಣಿಗೆ ಬಳಿಕ ಸ್ವೀಡನ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಆಂತರಿಕ ವ್ಯವಹಾರಗಳ ಸಚಿವ ಮೈಕಲ್‌ ಡ್ಯಾಮ್‌ಬರ್ಗ್‌ ಅವರು, ಫೆಬ್ರುವರಿ 14 ವರೆಗೆ ಈ ಆದೇಶವು ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಸ್ವೀಡನ್‌ನಲ್ಲಿ ಇಂಗ್ಲೆಂಡ್‌ ಹಾಗೂ ಡೆನ್ಮಾರ್ಕ್‌ ಪ್ರಯಾಣಿಕರಿಗೂ ನಿಷೇಧ ಹೇರಲಾಗಿದ್ದು, ಅದನ್ನೂ ವಿಸ್ತರಿಸಾಗಿದೆ.

ನಾರ್ವೆಯಲ್ಲಿ ಈವರೆಗೆ ಒಟ್ಟು 60,957 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 49,835 ಸೋಂಕಿತರು ಗುಣಮುಖರಾಗಿದ್ದು, 544 ಮಂದಿ ಮೃತಪಟ್ಟಿದ್ದಾರೆ. ಇನ್ನೂ 10,578 ಪ್ರಕಣಗಳು ಸಕ್ರಿಯವಾಗಿವೆ.

ಸ್ವೀಡನ್‌ನಲ್ಲಿ 5,47,166 ಪ್ರಕರಣಗಳು ವರದಿಯಾಗಿದ್ದು, 11,005 ಸೋಂಕಿತರು ಮೃತಪಟ್ಟಿದ್ದಾರೆ.

98 ಲಕ್ಷ ಸಕ್ರಿಯ ಪ್ರಕರಣ
ಜಾಗತಿಕ ಕೋವಿಡ್–19 ಸೋಂಕಿತರ ಸಂಖ್ಯೆಯು ಹತ್ತು ಕೋಟಿಯತ್ತ ಸಾಗಿದ್ದು, ಇದುವರೆಗೆ 9 ಕೋಟಿ 94 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ವೆಬ್‌ಸೈಟ್‌ ನೀಡಿರುವ ಮಾಹಿತಿ ಪ್ರಕಾರ ಇಂದು ಬರೋಬ್ಬರಿ 1.88 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 4,724 ಮಂದಿ ಮೃತಪಟ್ಟಿದ್ದು, 1.62 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಚೇತರಿಸಿಕೊಂಡವರ ಸಂಖ್ಯೆ 7.15 ಕೋಟಿ ದಾಟಿದ್ದು, ಸಾವಿನ ಸಂಖ್ಯೆ 21 ಲಕ್ಷಕ್ಕೇರಿದೆ. ಇನ್ನೂ 2 ಕೋಟಿ 58 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

ಅತಿಹೆಚ್ಚು (2.55 ಕೋಟಿ) ಪ್ರಕರಣಗಳು ವರದಿಯಾಗಿರುವ ಅಮೆರಿದಲ್ಲಿ ಈವರೆಗೆ 1.53 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 4.27 ಲಕ್ಷಕ್ಕೇರಿದೆ. ಇನ್ನೂ 98 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಭಾರತದಲ್ಲಿ 1.06 ಕೋಟಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 1.03 ಕೋಟಿ ಜನರು ಗುಣಮುಖರಾಗಿದ್ದಾರೆ. 1.53 ಲಕ್ಷ ಸೋಂಕಿತರು ಮೃತಪಟ್ಟಿದ್ದರೆ, ಇನ್ನೂ 1.85 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಉಳಿದಂತೆ ಫ್ರಾನ್ಸ್‌ನಲ್ಲಿ 27 ಲಕ್ಷ, ಇಂಗ್ಲೆಂಡ್‌ನಲ್ಲಿ 19 ಲಕ್ಷ, ಬ್ರೆಜಿಲ್‌ನಲ್ಲಿ 9 ಲಕ್ಷ, ಬೆಲ್ಜಿಯಂನಲ್ಲಿ 6 ಲಕ್ಷ, ರಷ್ಯಾ ಹಾಗೂ ಇಟಲಿಯಲ್ಲಿ ತಲಾ 5 ಲಕ್ಷ, ಸರ್ಬಿಯಾದಲ್ಲಿ 3 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT