ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆಗೆ ಬೇಕು ಮೂರು ವರ್ಷ!

ಮೊದಲ ಹತ್ತು ಲಕ್ಷ ಜನರಿಗೆ ಲಸಿಕೆ: ಬ್ರಿಟನ್, ಅಮೆರಿಕಕ್ಕಿಂತಲೂ ಭಾರತ ಮುಂದೆ
Last Updated 24 ಜನವರಿ 2021, 20:30 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕ ಮತ್ತು ಬ್ರಿಟನ್‌ಗಿಂತಲೂ ಅತ್ಯಂತ ವೇಗವಾಗಿ ಭಾರತವು ದೇಶದ ಮೊದಲ 10 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿದೆ. ಆದರೆ, ಇದೇ ವೇಗದಲ್ಲಿ ಆದ್ಯತೆಯಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ಮೂರು ವರ್ಷಗಳು ಬೇಕು ಎಂದು ತಜ್ಞರು ಅಂದಾಜಿಸಿದ್ದಾರೆ.

ಭಾರತವು ಪ್ರಸ್ತುತ ದಿನಕ್ಕೆ 3 ಲಕ್ಷ ಜನರಿಗೆ ಲಸಿಕೆ ಹಾಕುವ ಸಾಮರ್ಥ್ಯ ಹೊಂದಿದೆ. ಲಸಿಕಾ ಕಾರ್ಯಕ್ರಮದ ಮೊದಲ ವಾರದ ಸಂಖ್ಯೆಗಳ ಪ್ರಕಾರ, ಪ್ರಸ್ತುತ ಲಸಿಕಾ ಸಾಮರ್ಥ್ಯ ದರವು ಶೇಕಡ 58 ಆಗಿದೆ. ಆದರೆ, ಮುಂಬರುವ ದಿನಗಳಲ್ಲಿ ಇದು ಸುಧಾರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಸಿಕಾ ಸಾಮರ್ಥ್ಯ ದರವು ದಿನಕ್ಕೆ ಶೇಕಡ 67 ಆದರೆ, ಕೆಲವೇ ತಿಂಗಳುಗಳಲ್ಲಿ 30 ಲಕ್ಷ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೋವಿಡ್ ಕಾರ್ಯಕರ್ತರಿಗೆ ಲಸಿಕೆ ಲಭಿಸಲಿದೆ. ಇದಕ್ಕಾಗಿ ನಾವು ಹೆಚ್ಚಿನ ಸಾಮರ್ಥ್ಯ ತೋರಬೇಕಿದೆ ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕ, ವೈರಲಾಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದಾರೆ.

ಲಸಿಕೆಯ ಎರಡನೇ ಹಂತದ ಕಾರ್ಯಕ್ರಮದಲ್ಲಿ 20 ಲಕ್ಷ ಮುಂಚೂಣಿ ಕೋವಿಡ್ ಕಾರ್ಯಕರ್ತರಿಗೆ ಲಸಿಕೆ ನೀಡಬೇಕು. ಇದು ಏಪ್ರಿಲ್ ಅಥವಾ ಮೇ ವೇಳೆಗೆ ಆಗುವ ಸಾಧ್ಯತೆ ಇದೆ. ಪ್ರಸ್ತುತ ದಿನಕ್ಕೆ 3 ಲಕ್ಷ ಜನರಿಗೆ ಲಸಿಕೆ ನೀಡಿದರೂ ಒಟ್ಟಾರೆ 30 ಕೋಟಿ ಜನರಿಗೆ ಲಸಿಕೆ ನೀಡಲು 36 ತಿಂಗಳು ಅಂದರೆ ಮೂರು ವರ್ಷಗಳು ಬೇಕಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT