ಬುಧವಾರ, ಮೇ 25, 2022
22 °C

ಲಸಿಕೆ ಬೂಸ್ಟರ್‌ ಎಂಬುದು ‘ಹಗರಣ’: ಡಬ್ಲ್ಯುಎಚ್‌ಒ ಮುಖ್ಯಸ್ಥ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಜಿನಿವಾ: ಬಡ ರಾಷ್ಟ್ರಗಳಲ್ಲಿ ನಾಗರಿಕರು ಒಂದೇ ಒಂದು ಡೋಸ್‌ ಲಸಿಕೆ ಪಡೆಯಲೂ ಹೆಣಗಾಡುತ್ತಿರುವ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಬೂಸ್ಟರ್‌ ಹೆಸರಿನಲ್ಲಿ ನಡೆಯುತ್ತಿರುವ ಲಸಿಕೆಯ ಅಸಮಾನ ಹಂಚಿಕೆಯು ಒಂದು ಹಗರಣ. ಅದು ನಿಲ್ಲಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೆಬ್ರೆಯೆಸಸ್, ‘ಲಸಿಕಾ ನೀಡಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ದೇಶಗಳು ಬೂಸ್ಟರ್ ಡೋಸ್‌ಗಳನ್ನು ನೀಡುತ್ತಿರುವ ಹೊತ್ತಿನಲ್ಲಿ, ಬಡ ದೇಶಗಳು ಲಸಿಕೆಗಾಗಿ ಇನ್ನೂ ಕಾಯುತ್ತಿವೆ,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ

ಕಡಿಮೆ ಆದಾಯದ ದೇಶಗಳಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಂತದ ಲಸಿಕಾ ಕಾರ್ಯಕ್ರಮಕ್ಕಿಂತಲೂ ಆರು ಪಟ್ಟು ಮಿಗಿಲಾಗಿ ಹಲವು ದೇಶಗಳಲ್ಲಿ ಬೂಸ್ಟರ್‌ ಅಭಿಯಾನ ನಡೆಯುತ್ತಿದೆ. ಇದೊಂದು ಹಗರಣ. ಇದು ನಿಲ್ಲಬೇಕು,’ ಎಂದು ಅವರು ವಿಶ್ವ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದನ್ನು ಗೆಬ್ರೆಯೆಸಸ್‌ ಟೀಕಿಸಿದ್ದಾರೆ. ‘ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದರಲ್ಲಿ ಅಥವಾ ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ಅರ್ಥವಿಲ್ಲ. ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಪ್ರಪಂಚದಾದ್ಯಂತ ಸಂಕಷ್ಟದಲ್ಲಿರುವ ಹಲವು ಗುಂಪುಗಳಿವೆ. ಅವರು ಲಸಿಕೆಗಾಗಿ ಇನ್ನೂ ಕಾಯುತ್ತಿದ್ದಾರೆ,’ ಎಂದು ಹೇಳಿದ್ದಾರೆ.

ಲಸಿಕೆಯ ಅಸಮಾನ ವಿತರಣೆಯು ಆಫ್ರಿಕಾ ಖಂಡವನ್ನು ತೀವ್ರವಾಗಿ ಕಾಡಿದೆ. ಅಲ್ಲಿ ಇಡೀ ಖಂಡದ ಜನಸಂಖ್ಯೆಯ ಕೇವಲ ಶೇ 6ರಷ್ಟು ಜನ ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಡಬ್ಲ್ಯುಎಚ್‌ಒದ ಆಫ್ರಿಕಾ ಪ್ರಾಂತ್ಯದ ಮುಖ್ಯಸ್ಥರು ಅಕ್ಟೋಬರ್ 28ರಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು