ಬುಧವಾರ, ಅಕ್ಟೋಬರ್ 28, 2020
24 °C

Covid-19 World Update | 3.44 ಕೋಟಿ ಸೋಂಕಿತರು, 10.26 ಲಕ್ಷ ಜನರು ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದು, ಈವರೆಗೂ 3,44,97,381 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 2,39,51,761 ಜನರು ಗುಣಮುಖರಾಗಿದ್ದು, 10,26,717 ಜನರು ಸಾವಿಗೀಡಾಗಿದ್ದಾರೆ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಪ್ರಕಾರ,  ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 73,31,784 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 28,73,369 ಮಂದಿ ಗುಣಮುಖರಾಗಿದ್ದಾರೆ. 2,08,693 ಮಂದಿ ಸಾವಿಗೀಡಾಗಿದ್ದಾರೆ.

ಚೀನಾದ ಮುಖ್ಯ ಪ್ರದೇಶದಲ್ಲಿ ಶುಕ್ರವಾರ 10 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಹೊರಗಿನಿಂದ ಬಂದವರಿಗೆ ತಗುಲಿರುವ ಒಟ್ಟು ಪ್ರಕರಣಗಳ ಸಂಖ್ಯೆ 2,885ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.

ಈ ಪೈಕಿ ಶಾಂಗೈನಲ್ಲಿ 4, ಗುವಾಂಗ್‌ಡಾಂಗ್‌ನಲ್ಲಿ 3, ಸಿಚುವಾನ್‌ನಲ್ಲಿ 2 ಮತ್ತು ಶಾನ್‌ಕ್ಸಿಯಲ್ಲಿ ಒಂದು ಪ್ರಕರಣಗಳು ವರದಿಯಾಗಿರುವುದಾಗಿ ಆಯೋಗ ತನ್ನ ದೈನಂದಿನ ವರದಿಯಲ್ಲಿ ಹೇಳಿದೆ.

ಚೀನಾದಲ್ಲಿ ಒಟ್ಟಾರೆ 90,584 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 85,494 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 4,739 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಭಾರತದಲ್ಲಿ 6,34,068 ಜನರಿಗೆ ಸೋಂಕು ತಗುಲಿದೆ. ಈವರೆಗೂ 99,773 ಮಂದಿ ಮೃತಪಟ್ಟಿದ್ದು, 5,352,078 ಮಂದಿ ಗುಣಮುಖರಾಗಿದ್ದಾರೆ. ಬ್ರೆಜಿಲ್‌ನಲ್ಲಿ 48,47,092 ಮಂದಿಗೆ ಸೋಂಕು ತಗುಲಿದ್ದು, 42,99,659 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ 1,44,680 ಜನರು ಸಾವಿಗೀಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಅರ್ಜೆಂಟೈನಾದಲ್ಲಿ 14,687 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಕೊರೊನಾ ವೈರಸ್ ಸೋಂಕು ಪ್ರಾರಂಭವಾದ ನಂತರದ ದಾಖಲೆಯ ದಿನದ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ 312 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 7,79,689ಕ್ಕೆ ತಲುಪಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಪೆರುವಿನಲ್ಲಿ 32,535, ಸ್ಪೇನ್‌ನಲ್ಲಿ 32,086, ಕೊಲಂಬಿಯಾ 26,397, ರಷ್ಯಾದಲ್ಲಿ 20,981 ಮತ್ತು ಅರ್ಜೆಂಟೈನಾದಲ್ಲಿ 20,599 ಜನರು ಈವರೆಗೆ ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು