ಶುಕ್ರವಾರ, ಆಗಸ್ಟ್ 12, 2022
27 °C

Covid-19 World Update | 2.54 ಕೋಟಿ ಕೊರೊನಾ ಸೋಂಕಿತರು, 8.50 ಲಕ್ಷ ಜನ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಜಗತ್ತಿನಾದ್ಯಂತ ಸುಮಾರು 2.54 ಕೋಟಿ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 8.50 ಲಕ್ಷ ಜನರು ಸಾವಿಗೀಡಾಗಿದ್ದಾರೆ. 

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,54,88,239ಗೆ ಮುಟ್ಟಿದ್ದು, 8,50,596 ಮಂದಿ ಮೃತಪಟ್ಟಿದ್ದಾರೆ. 16,822,093 ಸೋಂಕಿತರು ಗುಣಮುಖರಾಗಿದ್ದಾರೆ.

ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 60,31,013 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 1,83,598 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 21,84,825 ಜನರು ಈವರೆಗೆ ಗುಣಮುಖರಾಗಿದ್ದಾರೆ.

ಇದನ್ನೂ ಓದಿ: 

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌‌ನಲ್ಲಿ 39,08,272 ಪ್ರಕರಣಗಳು ಪತ್ತೆಯಾಗಿವೆ. 39,08,272 ಸೋಂಕಿತರು ಗುಣಮುಖರಾಗಿದ್ದು, 1,21,381  ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 36,91,166 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 28,39,882 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 65,288 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 9,92,402, ದಕ್ಷಿಣ ಆಫ್ರಿಕಾದಲ್ಲಿ 6,27,041, ಪೆರುವಿನಲ್ಲಿ 6,47,166, ಚಿಲಿಯಲ್ಲಿ 4,11,726, ಇರಾನ್‌ನಲ್ಲಿ 3,75,212 , ಇಂಗ್ಲೆಂಡ್‌ನಲ್ಲಿ 3,38,083 ಮತ್ತು ಸ್ಪೇನ್‌ನಲ್ಲಿ 4,62,858 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: 

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 41,589, ಇಟಲಿಯಲ್ಲಿ 35,483, ಮೆಕ್ಸಿಕೊದಲ್ಲಿ 64,414, ಫ್ರಾನ್ಸ್‌ನಲ್ಲಿ 30,640, ಸ್ಪೇನ್‌ನಲ್ಲಿ 29,094, ಪೆರುವಿನಲ್ಲಿ 28,788, ರಷ್ಯಾದಲ್ಲಿ 17,128, ಚಿಲಿಯಲ್ಲಿ 11,289, ದಕ್ಷಿಣ ಆಫ್ರಿಕಾದಲ್ಲಿ 14,149 ಮತ್ತು ಪಾಕಿಸ್ತಾನದಲ್ಲಿ 6,298 ಜನರು ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು