ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಬ್ರೆಜಿಲ್‌ನಲ್ಲಿ 33,523 ಪ್ರಕರಣ ದೃಢ, 814 ಜನ ಸಾವು

Last Updated 13 ಸೆಪ್ಟೆಂಬರ್ 2020, 1:52 IST
ಅಕ್ಷರ ಗಾತ್ರ

ಬ್ರೆಜಿಲ್: ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್‌ನಲ್ಲಿ 33,523 ಹೊಸ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಆ ಅವಧಿಯಲ್ಲಿ ಕೋವಿಡ್‌ನಿಂದಾಗಿ 800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮೂಲಕ ಬ್ರೆಜಿಲ್‌ನಲ್ಲಿ ಈವರೆಗೆ 43,15,687 ಜನರಿಗೆ ಸೋಂಕು ತಗುಲಿದ್ದು, ಕಳೆದ 24 ಗಂಟೆಯಲ್ಲಿ 814 ಜನರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆಯು 1,31,210ಕ್ಕೆ ತಲುಪಿದೆ.

ವಾರದ ಹಿಂದೆ ಬ್ರೆಜಿಲ್‌ನ ಕೊರೊನಾ ವೈರಸ್ ಸಾವಿನ ಸಂಖ್ಯೆ 1,25,521 ಆಗಿತ್ತು. ವಾರದ ಅವಧಿಯಲ್ಲಿ ದೇಶದಲ್ಲಿ ಸುಮಾರು 6,000 ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ವಾರದಿಂದ ವಾರಕ್ಕೆ ಮೃತರ ಸಂಖ್ಯೆಯು ಜಾಸ್ತಿಯಾಗುತ್ತಲೇ ಇದೆ. ಈವರೆಗೂ 3.5 ದಶಲಕ್ಷಕ್ಕೂ ಹೆಚ್ಚಿನ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆಯಲ್ಲಿ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ.ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಅಮೆರಿಕದಲ್ಲಿ 1,93,500 ಕ್ಕೂ ಹೆಚ್ಚಿನ ಜನರು ಕೋವಿಡ್-19ನಿಂದಾಗಿ ಮೃತಪಟ್ಟಿರುವುದಾಗಿ ತಿಳಿಸಿದೆ.

ದೃಢಪಡಿಸಿದ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಬ್ರೆಜಿಲ್ ಈಗ ಮೂರನೇ ಸ್ಥಾನದಲ್ಲಿದೆ. 4.6 ದಶಲಕ್ಷಕ್ಕೂ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದ್ದರೆ,6.4 ದಶಲಕ್ಷ ಪ್ರಕರಣಗಳೊಂದಿಗೆ ಅಮೆರಿಕಮೊದಲನೇ ಸ್ಥಾನದಲ್ಲಿದೆ.

ಇನ್ನುಳಿದಂತೆ 10,53,663 ಪ್ರಕರಣಗಳೊಂದಿಗೆ ರಷ್ಯಾದಲ್ಲಿ ಈವರೆಗೂ 18,426 ಜನರು ಸಾವಿಗೀಡಾಗಿದ್ದರೆ, 8,71,000 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪೆರುವಿನಲ್ಲಿ 7,16,670, ಕೊಲಂಬಿಯಾದಲ್ಲಿ 7,02,088, ಮೆಕ್ಸಿಕೋದಲ್ಲಿ 6,58,299, ದಕ್ಷಿಣ ಆಫ್ರಿಕಾದಲ್ಲಿ 6,48,214 ಮತ್ತು ಸ್ಪೇನ್‌ನಲ್ಲಿ 5,66,326 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಗತ್ತಿನಲ್ಲಿ 2,86,43,102 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 9,18,352 ಲಕ್ಷ ಜನರು ಸಾವಿಗೀಡಾಗಿದ್ದಾರೆ. 1,93,17,900 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT