ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್‌ಬಿಬಿ ಕೋವಿಡ್ ತಳಿ: ಸಿಂಗಪುರದಲ್ಲಿನವೆಂಬರ್‌ಗೆ ನಿತ್ಯ 15 ಸಾವಿರ ಪ್ರಕರಣ?

Last Updated 15 ಅಕ್ಟೋಬರ್ 2022, 11:34 IST
ಅಕ್ಷರ ಗಾತ್ರ

ಸಿಂಗಪುರ: ‘ಸಿಂಗಪುರದಲ್ಲಿ ಈಗ ಕೋವಿಡ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಹೆಚ್ಚು ಕಾಣಿಸಿಕೊಂಡಿದ್ದು, ನವೆಂಬರ್‌ ಮೊದಲ ಅವಧಿಯ ವೇಳೆಗೆ ನಿತ್ಯ 15 ಸಾವಿರ ಪ್ರಕರಣ ದಾಖಲಾಗುವ ಆತಂಕವಿದೆ’ ಎಂದು ಸರ್ಕಾರ ತಿಳಿಸಿದೆ.

ಆದರೆ, ಈ ಹಿಂದಿನ ಕೋವಿಡ್‌ ಅಲೆಯ ಪ್ರಕರಣಗಳಿಗೆ ಹೋಲಿಸಿದರೆ ಸಿಂಗಪುರ, ಪರಿಸ್ಥಿತಿಯನ್ನು ಎದುರಿಸುವ ಅಗತ್ಯ ವೈದ್ಯಕೀಯ ಆರೈಕೆ ಸಾಮರ್ಥ್ಯ ಹೊಂದಿದೆ. ನವೆಂಬರ್‌ಗೆ ಎಕ್ಸ್‌ಬಿಬಿ ಅಲೆ ತೀವ್ರವಾಗಬಹುದು ಎಂದು ಸಚಿವ ಒಂಗ್ ಯೆ ಕುಂಗ್‌ ಪ್ರತಿಕ್ರಿಯಿಸಿದ್ದಾರೆ.

ಎಕ್ಸ್‌ಬಿಬಿ ಎಂದು ಗುರುತಿಸಲಾದ ರೂಪಾಂತರ ಕೋವಿಡ್ ತಳಿಯ ಪಾಲು ಅಕ್ಟೋಬರ್‌ 3 ರಿಂದ 9ರ ಅವಧಿಯಲ್ಲಿ ದಾಖಲಾದ ಒಟ್ಟು ಪ್ರಕಣಗಳಲ್ಲಿ ಶೇ 54ರಷ್ಟಿದೆ ಎಂದು ಚಾನಲ್ ನ್ಯೂಸ್‌ ಏಷಿಯಾ ವರದಿ ಮಾಡಿದೆ. ಈ ತಳಿಯು ಮೊದಲಿಗೆ ಆಗಸ್ಟ್ ತಿಂಗಳು ಕಾಣಿಸಿಕೊಂಡಿತು. ಸದ್ಯ ಆಸ್ಟ್ರೇಲಿಯ, ಡೆನ್ಮಾರ್ಕ್, ಭಾರತ, ಜಪಾನ್‌ ಸೇರಿ 17 ದೇಶಗಳಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT