ಬುಧವಾರ, ಅಕ್ಟೋಬರ್ 28, 2020
24 °C

Covid-19 World Update | 3.72 ಕೋಟಿ ಜನರಿಗೆ ಸೋಂಕು, 10,74,178 ಜನ ಸಾವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ರಿಯೊ ಡಿ ಜನೈರೊ(ಬ್ರೆಜಿಲ್‌): ಜಗತ್ತಿನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 3.72 (3,72,28,773) ಕೋಟಿ ಮೀರಿದೆ. ಈವರೆಗೂ ಸೋಂಕಿನಿಂದ 10,74,178 ಮಂದಿ ಮೃತಪಟ್ಟಿದ್ದಾರೆ.

ಲ್ಯಾಟಿನ್ ಅಮೆರಿಕ ರಾಷ್ಟ್ರಗಳು ಮತ್ತು ಕೆರಿಬಿಯನ್ ಕೋವಿಡ್‌ನಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿವೆ. ಜೊತೆಗೇ, ಕೆಟ್ಟ ಆರ್ಥಿಕ ಪರಿಣಾಮಗಳನ್ನೂ ಅನುಭವಿಸಬೇಕಿದೆ. ಈ ಪ್ರದೇಶದ ಜಿಡಿಪಿಯಲ್ಲಿ ಸುಮಾರು ಶೇ.8.0 ರಷ್ಟು ಕುಸಿತವಾಗುವ ಮುನ್ಸೂಚನೆಯನ್ನು ವಿಶ್ವ ಬ್ಯಾಂಕ್‌ ಶುಕ್ರವಾರ ನೀಡಿದೆ.

‘ಕೋವಿಡ್ -19 ರ ಕೆಟ್ಟ ಆರ್ಥಿಕ ಮತ್ತು ಆರೋಗ್ಯದ ಪರಿಣಾಮಗಳನ್ನು ನಮ್ಮ ಪ್ರದೇಶ ಅನುಭವಿಸುತ್ತಿದೆ,’ ಎಂದು ಬ್ಯಾಂಕಿನ ಪ್ರಾದೇಶಿಕ ಉಪಾಧ್ಯಕ್ಷ ಕಾರ್ಲೋಸ್ ಫೆಲಿಪೆ ಜರಾಮಿಲ್ಲೊ ಹೇಳಿದ್ದಾರೆ.

ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳ ಪೈಕಿ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿವೆ. ಬ್ರೆಜಿಲ್‌ನಲ್ಲಿ ಒಟ್ಟು 5,057,190 ಕೋವಿಡ್‌ ಪ್ರಕರಣಗಳಿದ್ದು, ಅಲ್ಲಿ 1,49,692ಮಂದಿ ಮೃತಪಟ್ಟಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅದು ಮೂರನೇ ಸ್ಥಾನದಲ್ಲಿದೆ.

ವಿಶ್ವದಲ್ಲಿ ಈ ವರೆಗೆ 2,79,55,759 ಮಂದಿ ಗುಣಮುಖರಾಗಿದ್ದಾರೆ ಹಾಗೂ 81,98,836 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ಕೋವಿಡ್‌ ಟ್ರ್ಯಾಕರ್‌ ವರ್ಲ್ಡೋಮೀಟರ್‌ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ ಒಟ್ಟು 79,08,092 ಮಂದಿಗೆ ಸೋಂಕು ತಗುಲಿದ್ದರೆ, 2,18,801 ಮಂದಿ ಈವರೆಗೆ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಎರಡನೇ ರಾಷ್ಟ್ರ ಭಾರತವಾಗಿದ್ದು, ಇಲ್ಲಿ, ಈ ವರೆಗೆ 69,97,852 ಮಂದಿಗೆ ಸೋಂಕು ತಗುಲಿದೆ. 1,07,568 ಮಂದಿ ಮೃತಪಟ್ಟಿದ್ದಾರೆ.

ಇನ್ನುಳಿದಂತೆ ರಷ್ಯಾದಲ್ಲಿ 12,85,084 ಪ್ರಕರಣಗಳು, 22,454 ಮಂದಿ ಮೃತಪಟ್ಟಿದ್ದಾರೆ. ಕೊಲಂಬಿಯಾದಲ್ಲಿ 8,94,300 ಪ್ರಕರಣಗಳು ಹಾಗೂ 27,495 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು