ಗುರುವಾರ , ಡಿಸೆಂಬರ್ 1, 2022
24 °C

ಕೋವಿಡ್‌ ಸೋಂಕಿತ ಹದಿಹರೆಯದವರಲ್ಲಿ ಹೆಚ್ಚಿದ ಟೈಪ್‌-1 ಮಧುಮೇಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಕೋವಿಡ್‌ 19 ಸೋಂಕಿತ ಮಕ್ಕಳು ಮತ್ತು ಹದಿಹರೆಯದವರಲ್ಲಿ ಟೈಪ್ 1 ಡಯಾಬಿಟಿಸ್ (ಟಿ1ಡಿ) ಹೆಚ್ಚು ಅಪಾಯದ ಮಟ್ಟದಲ್ಲಿರುವುದು ಕಂಡುಬಂದಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

18 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 10 ಲಕ್ಷ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಕೋವಿಡ್‌ ಸೋಂಕಿತರಲ್ಲಿ ಅತಿ ಹೆಚ್ಚಿನ ಅಪಾಯದ ಮಟ್ಟದಲ್ಲಿ ಟೈಪ್ 1 ಡಯಾಬಿಟಿಸ್‌ಗೆ ಕಾರಣವಾಗುತ್ತಿರುವುದು ಕಂಡುಬಂದಿದೆ ಎಂದು ಇತ್ತೀಚೆಗೆ ಜಮಾ (ಜೆಎಎಂಎ) ನೆಟ್‌ವರ್ಕ್ ಓಪನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಕೋವಿಡ್ ದೃಢಪಟ್ಟ ಆರು ತಿಂಗಳಲ್ಲಿ ಹೊಸದಾಗಿ ಟೈಪ್ 1 ಡಯಾಬಿಟಿಸ್‌ಗೆ ತುತ್ತಾಗಿರುವುದು ಕಂಡುಬಂದಿದೆ. ಇದರ ಪ್ರಮಾಣವೂ ಶೇ 72ರಷ್ಟು ಹೆಚ್ಚಳ ಆಗಿದೆ ಎಂದು ಅಧ್ಯಯನ ತಂಡದಲ್ಲಿದ್ದ ಅಮೆರಿಕದ ಕೇಸ್ ವೆಸ್ಟರ್ನ್ ರಿಸರ್ವ್ ಸ್ಕೂಲ್ ಆಫ್ ಮೆಡಿಸಿನ್‌ನ ಪ್ರಾಧ್ಯಾಪಕರಾದ ಪಮೇಲಾ ಡೇವಿಸ್ ಹೇಳಿದ್ದಾರೆ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು