ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಪ್ರವಾಹ: ಸಾವಿನ ಸಂಖ್ಯೆ 98ಕ್ಕೆ ಏರಿಕೆ

Last Updated 31 ಅಕ್ಟೋಬರ್ 2022, 3:33 IST
ಅಕ್ಷರ ಗಾತ್ರ

ಮನಿಲಾ:ಫಿಲಿಪ್ಪೀನ್ಸ್‌ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿಸಂಭವಿಸಿರುವ ಪ್ರವಾಹಕ್ಕೆ ಸಿಲುಕಿಮೃತಪಟ್ಟವರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಸೋಮವಾರ ತಿಳಿಸಿದೆ.

ಸಂಸ್ಥೆಯು, ಇನ್ನೂ 63 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ. ಹೀಗಾಗಿ,ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಒಟ್ಟಾರೆ ಸಾವಿನ ಸಂಖ್ಯೆಯ ಅರ್ಧದಷ್ಟು ಪ್ರಕರಣಗಳುಮಿಂದನಾವೊ ಪ್ರಾಂತ್ಯದಲ್ಲೇ ವರದಿಯಾಗಿವೆ.‌ದ್ವೀಪರಾಷ್ಟ್ರದ ದಕ್ಷಿಣದ ಮಿಂದನಾವೊ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಸರಣಿ ಭೂಕುಸಿತಗಳಿಂದಾಗಿ ತೀವ್ರ ಹಾನಿಯಾಗಿದೆ.

ಎರಡು ದಿನಗಳಿಂದ ನಾಪತ್ತೆಯಾಗಿರುವವರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ಮಿಂದನಾವೊ ಪ್ರಾಂತ್ಯದ ನಾಗರಿಕ ಭದ್ರತೆ ವಿಭಾಗದ ಮುಖ್ಯಸ್ಥ ನಗುಯಿಬ್‌ ಸಿನಾರಿಂಬೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT