ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ರಾಜನಾಥ ಸಿಂಗ್‌ ಮಂಗೋಲಿಯಾ ಭೇಟಿ: ರಕ್ಷಣಾ ಪಾಲಿದಾರಿಕೆ ಕುರಿತು ಚರ್ಚೆ

Last Updated 6 ಸೆಪ್ಟೆಂಬರ್ 2022, 13:30 IST
ಅಕ್ಷರ ಗಾತ್ರ

ಉಲಾನ್‌ಬಟೋರ್‌: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಂಗೋಲಿಯಾ ಪ್ರವಾಸದಲ್ಲಿದ್ದು, ಅಧ್ಯಕ್ಷ ಉಕನಾಗಿನ್‌ ಖುರೇಲ್‌ಸುಕ್‌ ಅವರನ್ನು ಮಂಗಳವಾರ ಭೇಟಿ ಮಾಡಿದರು. ಎರಡೂ ದೇಶಗಳ ನಡುವಿನ ಬಹು ಆಯಾಮದ ರಕ್ಷಣಾ ಪಾಲಿದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಿದರು.

ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಸಚಿವರೊಬ್ಬರು ಮಂಗೋಲಿಯಾ ಪ್ರವಾಸ ಕೈಗೊಂಡಿದ್ದಾರೆ. ಐದು ದಿನಗಳಜಪಾನ್‌ ಹಾಗೂ ಮಂಗೋಲಿಯಾ ಪ್ರವಾಸದಲ್ಲಿರುವ ಸಚಿವರು ಎರಡೂ ದೇಶಗಳ ಜೊತೆಯಲ್ಲಿ ಭಾರತದ ರಕ್ಷಣಾ ಸಂಬಂಧಗಳನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ.

ಅಧ್ಯಕ್ಷರ ಭೇಟಿಗೂ ಮೊದಲು ರಾಜನಾಥ ಸಿಂಗ್‌ ಅವರು ಇಲ್ಲಿನ ರಕ್ಷಣಾ ಸಚಿವ ಸೈಕನ್‌ಬಯಾರ್‌ ಗುರ್ಸೆದ್‌ ಅವರೊಂದಿಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT