ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಕೋವಿಡ್‌ ನಿರ್ಮೂಲನೆಗೆ ‘ಡೆಲ್ಟಾ’ ರೂಪಾಂತರ ವೈರಸ್ ಅಡ್ಡಿ

ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಮುಖ್ಯ ಸಲಹೆಗಾರ ಆಂಥೊನಿ ಫೌಸಿ
Last Updated 23 ಜೂನ್ 2021, 6:47 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕೋವಿಡ್‌ 19‘ ಸಾಂಕ್ರಾಮಿಕದ ಸಂಪೂರ್ಣ ನಿರ್ಮೂಲನೆ ಮಾಡುವ ಅಮೆರಿಕದ ಪ್ರಯತ್ನಗಳಿಗೆ ಅಪಾಯಕಾರಿಯಾಗಿರುವ ‘ಡೆಲ್ಟಾ‘ ರೂಪಾಂತರ ಕೊರೊನಾ ವೈರಸ್ ಬಹುದೊಡ್ಡ ಆತಂಕವನ್ನು ತಂದೊಡ್ಡಿದೆ ಎಂದು ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ (ಎನ್‌ಐಎಐಡಿ) ಮುಖ್ಯಸ್ಥ ಹಾಗೂ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೊನಿ ಫೌಸಿ ಎಚ್ಚರಿಸಿದ್ದಾರೆ.

ಕೋವಿಡ್‌–19 ಕುರಿತು ಮಂಗಳವಾರ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರ ವೈರಸ್‌ ಈಗ ಅಮೆರಿಕದಲ್ಲೂ ಕಾಣಿಸಿಕೊಳ್ಳುತ್ತಿದೆ. ಪ್ರಸ್ತುತ ಅಮೆರಿಕದಲ್ಲಿ ವರದಿಯಾಗಿರುವ ಹೊಸ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇ 20 ಕ್ಕಿಂತಲೂ ಹೆಚ್ಚು ಡೆಲ್ಟಾ ರೂಪಾಂತರ ವೈರಸ್‌ ಪ್ರಕರಣಗಳಾಗಿವೆ. ಎರಡು ವಾರಗಳ ಹಿಂದಿನಿಂದ ಶೇ 10ರಷ್ಟು ರೂಪಾಂತರ ವೈರಸ್‌ ಸೋಂಕಿನ ಪ್ರಕರಣಗಳು ಹೆಚ್ಚಾಗಿದೆ.

‘ಬ್ರಿಟನ್‌ನಲ್ಲಿರುವ ಪರಿಸ್ಥಿತಿಯಂತೆಯೇ, ಕೋವಿಡ್‌ –19 ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಅಮೆರಿಕದ ಪ್ರಯತ್ನಕ್ಕೆ ಡೆಲ್ಟಾ ರೂಪಾಂತರ ವೈರಸ್ ಅಡ್ಡಿಯಾಗುತ್ತಿದೆ‘ ಎಂದು ಫೌಸಿ ಸುದ್ದಿಗಾರರಿಗೆ ತಿಳಿಸಿದರು.

‘ಇಂಥ ಬೆಳವಣಿಗೆಗಳ ನಡುವೆಯೇ ಅಮೆರಿಕದಲ್ಲಿ ಉತ್ಪಾದಿಸಿರುವ ಕೋವಿಡ್‌ ಲಸಿಕೆಗಳು ಡೆಲ್ಟಾ ರೂಪಾಂತರ ವೈರಸ್‌ ವಿರುದ್ಧವೂ ಪರಿಣಾಮಕಾರಿಯಾಗಿವೆ ಎಂಬುದು ಶುಭಸುದ್ದಿಯಾಗಿದೆ‘ ಎಂದು ಫೌಸಿ ಹೇಳಿದರು.

‘ನಮ್ಮಲ್ಲಿ ಸಾಕಷ್ಟು ವೈದ್ಯಕೀಯ ಪರಿಕರಗಳಿವೆ. ಅವುಗಳನ್ನು ಬಳಸಿಕೊಂಡು ರೂಪಾಂತರ ವೈರಸ್‌ ವಿರುದ್ಧ ಹೋರಾಡಿ, ಅದನ್ನು ನಿರ್ಮೂಲನೆ ಮಾಡೋಣ‘ ಎಂದು ಅವರು ಪ್ರತಿಪಾದಿಸಿದರು.

ಡೆಲ್ಟಾ ರೂಪಾಂತರ ವೈರಸ್‌ ಇತ್ತೀಚೆಗೆ ಬ್ರಿಟನ್‌ಲ್ಲಿ ಪ್ರಬಲವಾಗಿದೆ. ಇದು, ಆ ದೇಶದಲ್ಲಿ ಮೊದಲು ಪತ್ತೆಯಾಗಿದ್ದ ಆಲ್ಫಾ ರೂಪಾಂತರ ವೈರಸ್‌ ತೀವ್ರತೆಯನ್ನು ಮೀರಿಸಿದೆ. ಸದ್ಯ ಬ್ರಿಟನ್‌ಲ್ಲಿ ಪತ್ತೆಯಾಗಿರುವ ಹೊಸ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಶೇ 90ರಷ್ಟು ಡೆಲ್ಟಾ ರೂಪಾಂತರ ವೈರಸ್ ಸೋಂಕಿನ ಪ್ರಕರಣಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT