ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಬೇಕು: ಅಮೆರಿಕ ಸಂಸದರ ಪ್ರತಿಪಾದನೆ

Last Updated 1 ಮಾರ್ಚ್ 2023, 14:14 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳೆದ ವಾರ ಭೇಟಿಯಾಗಿರುವ ಅಮೆರಿಕದ ಸಂಸದರ ಉನ್ನತ ನಿಯೋಗವು ಉಕ್ರೇನ್‌ಗೆ ತಮ್ಮ ಸಹಾಯ ಹೆಚ್ಚಿಸುವ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಬೇಕು ಎಂದು ಹೇಳಿದೆ.

ಆಡಳಿತರೂಢ ಡೆಮಾಕ್ರಟಿಕ್‌ ಪಕ್ಷದ ಸಂಸದರ ನಿಯೋಗವು ಭಾರತದ ಭೇಟಿ ನೀಡಿದ್ದಾಗ, ಮೋದಿ ಅವರೊಂದಿಗೆ ಚರ್ಚಿಸುವ ಅವಕಾಶ ಸಿಕ್ಕಿತು. ಉಕ್ರೇನ್‌ ಸಂಘರ್ಷವು ನಿರಂಕುಶಾಧಿಕಾರಿ ಮತ್ತು ಪ್ರಜಾಪ್ರಭುತ್ವದ ನಡುವಿನ ಯುದ್ಧವಾಗಿದೆ. ಉಕ್ರೇನ್‌ಗೆ ಹೆಚ್ಚಿನ ನೆರವು ನೀಡುವಲ್ಲಿ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಬೇಕಿರುವುದನ್ನು ಒತ್ತಿ ಹೇಳಿರುವುದಾಗಿ ಅಮೆರಿಕದ ಸೆನೆಟ್‌ ಮೆಜಾರಿಟಿ ಲೀಡರ್ ಚಾರ್ಲ್ಸ್‌ ಶುಮರ್‌ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಷ್ಯಾದಂತಹ ನಿರಂಕುಶಾಧಿಕಾರವು ಮೇಲುಗೈ ಸಾಧಿಸಿದರೆ, ನಿರಂಕುಶಾಧಿಕಾರದ ಚೀನಾವೂ ಜಗತನ್ನು ನಿಯಂತ್ರಿಸಲು ಹೆಚ್ಚು ಸಿದ್ಧವಾಗಿದೆ. ಇತ್ತೀಚಿನ ಬೆಳವಣಿಗೆ ಗಮನಿಸಿದರೆ, ಇದು ಕೇವಲ ತೈವಾನ್‌ಗೆ ಅಷ್ಟೇ ಅಲ್ಲ, ಇದು ಚೀನಾ ಮತ್ತು ಭಾರತದ ನಡುವೆ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿರುವ (ಎಲ್‌ಒಸಿ) ವಿವಾದಕ್ಕೂ ವಿಸ್ತರಿಸುತ್ತದೆ. ಉಕ್ರೇನ್ ಯುದ್ಧವು ಎಲ್‌ಒಸಿ ಮೇಲೂ ಪರಿಣಾಮ ಬೀರುವುದನ್ನು ನಿರ್ದಿಷ್ಟವಾಗಿ ಮೋದಿ ಅವರ ಗಮನಕ್ಕೆ ತಂದಿದ್ದೇವೆ’ ಎಂದೂ ಅವರು ಹೇಳಿದರು.

‘ಚೀನಾಕ್ಕೆ ನಿಜವಾದ ಸೂಕ್ತ ಪ್ರತಿರೋಧಶಕ್ತಿ ಎಂದರೆ ಭಾರತ ಮಾತ್ರ. ಭಾರತವು ಪಶ್ಚಿಮದೊಂದಿಗೆ ಸೇರಿದರೆ, ನಾವು ನಿಜವಾಗಿಯೂ ಚೀನಿಯರನ್ನು ಮೀರಿಸಬಹುದು. ಷಿ ಜಿನ್‌ಪಿಂಗ್‌ ಅಮೆರಿಕ ಮೀರಿಸಲು ಬಯಸುತ್ತಾರೆ. ನಾವು ನಮ್ಮ ನಾಯಕತ್ವ ಕಳೆದುಕೊಳ್ಳಲು ಸಾಧ್ಯವಿಲ್ಲ. ಈ ಶತಮಾನದಲ್ಲಿ ಚೀನಿ ಕಮ್ಯುನಿಸ್ಟ್ ಪಕ್ಷವನ್ನು, ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ತಡೆಯಲು ಬಯಸಿದರೆ, ಅಮೆರಿಕವು ಭಾರತದ ಜತೆಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿ, ಗಾಢವಾಗಿಸಬೇಕು’ ಎಂದು ಅವರು ತಿಳಿಸಿದರು.

‘ಕೇವಲ ರಕ್ಷಣೆ ಮಾತ್ರವಲ್ಲದೆ ಆರ್ಥಿಕವಾಗಿ, ಭೌಗೋಳಿಕ, ತಂತ್ರಜ್ಞಾನ, ಮೂಲಸೌರ್ಕಯಗಳ ವಿಷಯದಲ್ಲಿ ಸಹಕಾರ, ಸಹಭಾಗಿತ್ವ ವಹಿಸಬೇಕು. ನಮ್ಮ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು, ವ್ಯಾಪಾರ ವಿಸ್ತರಿಸಲು ಮತ್ತು ಪ್ರತಿಭಾವಂತ ವಿದೇಶಿ ಉದ್ಯೋಗಿಗಳ ನೇಮಕ ಪ್ರಕ್ರಿಯೆಯನ್ನೂ ಸುಲಭಗೊಳಿಸಬೇಕು’ ಎಂದು ಶುಮರ್‌ ಹೇಳಿದರು.

‘ನಾವು ಭಾರತದ ಜತೆಗೆ ಹೆಚ್ಚು ಒತ್ತುಕೊಟ್ಟು ಹಂಚಿಕೊಂಡ ಮತ್ತೊಂದು ಸಂಗತಿ ಎಂದರೆ, ಅಮೆರಿಕವು ಭಾರತ ಮತ್ತು ಇತರ ಪೆಸಿಫಿಕ್ ಮಿತ್ರರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್‌ಗೆ ಹೆಚ್ಚು ಸಹಕಾರ ನೀಡಬೇಕು. ಭಾರತವು ಸಹಕಾರದ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನೆ ವ್ಯವಸ್ಥೆಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕು. ಆವು ನಮ್ಮ ರಕ್ಷಣಾ ಕೈಗಾರಿಕಾ ನೆಲೆಯನ್ನು ವಿಸ್ತರಿಸಬಹುದು’ ಎಂದು ಶುಮರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT