ಭಾನುವಾರ, ಜನವರಿ 24, 2021
28 °C

ಟ್ರಂಪ್‌ ಪದಚ್ಯುತಿಗೆ ಮುಂದಾಗಿ: ಉಪಾಧ್ಯಕ್ಷ ಮೈಕ್ ಪೆನ್ಸ್‌ರಿಗೆ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಆ ಸ್ಥಾನದಿಂದ ಪದಚ್ಯುತಗೊಳಿಸಲು ಸಂವಿಧಾನದ 25ನೇ ತಿದ್ದುಪಡಿ ನಿಯಮವನ್ನು ಜಾರಿಗೊಳಿಸಬೇಕು’ ಎಂದು ಡೆಮಾಕ್ರಟಿಕ್ ಪಕ್ಷದ ಹಿರಿಯ ನಾಯಕರು ಉಪಾಧ್ಯಕ್ಷ ಮೈಕ್ ಪೆನ್ಸ್‌ ಅವರಿಗೆ ಆಗ್ರಹಪಡಿಸಿದ್ದಾರೆ.

ಯು.ಎಸ್ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ ಬೆಳವಣಿಗೆಗಳ ಹಿಂದೆಯೇ ಈ ಆಗ್ರಹವು ವ್ಯಕ್ತವಾಗಿದೆ. ಸಂಪುಟದ ಬಹುಮತದ ತೀರ್ಮಾನದಂತೆ ಅಧ್ಯಕ್ಷರ ಪದಚ್ಯುತಿಗೆ ಕ್ರಮ ತೆಗೆದುಕೊಳ್ಳಲು ಉಪಾಧ್ಯಕ್ಷರಿಗೆ ಸಂವಿಧಾನದ 25ನೇ ತಿದ್ದುಪಡಿ ಅನುವು ಮಾಡಿಕೊಡಲಿದೆ.

ಇದನ್ನೂ ಓದಿ: 

ಅಧ್ಯಕ್ಷ ಟ್ರಂಪ್‌ ಅವರ ಅಪಾಯಕಾರಿ ಮತ್ತು ದೇಶದ್ರೋಹದ ನಡೆಗಳ ಹಿನ್ನೆಲೆಯಲ್ಲಿ ಅವರನ್ನು ಆ ಸ್ಥಾನದಿಂದ ತೆಗೆಯುವುದು ಅಗತ್ಯವಾಗಿದೆ ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್‌ನಲ್ಲಿ ಡೆಮಾಕ್ರಟಿಕ್‌ ‍ಪಕ್ಷದ ನಾಯಕ ಚುಕ್ ಚುಮರ್ ಅವರು ಗುರುವಾರ ಜಂಟಿ ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮೊದಲು ಡೆಮಾಕ್ರಟಿಕ್‌ ಪಕ್ಷದ ನಾಯಕರು ಈ ಕುರಿತು ಉಪಾಧ್ಯಕ್ಷರ ಭೇಟಿಗೆ ಮುಂದಾಗಿದ್ದರಾದರೂ, ಈ ನಿಟ್ಟಿನಲ್ಲಿ ಅವರ ಯತ್ನ ಫಲ ನೀಡಲಿಲ್ಲ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು