ಭಾನುವಾರ, ಸೆಪ್ಟೆಂಬರ್ 19, 2021
24 °C

ಉಯಿಗರ್‌ ಮುಸ್ಲಿಮರನ್ನು ಬಂಧಿಸಿಡಲು ದುಬೈನಲ್ಲಿ ಚೀನಾದ ರಹಸ್ಯ ಜೈಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್: ‘ಉಯಿಗರ್‌ ಮುಸ್ಲಿಮರನ್ನು ಬಂಧಿಸಿ ಇಡುವುದಕ್ಕಾಗಿ ದುಬೈನಲ್ಲಿ ಚೀನಾವು ರಹಸ್ಯ ಜೈಲು ಹೊಂದಿದೆ’ ಎಂದು ಚೀನಾದ ಯುವತಿಯೊಬ್ಬರು ತಿಳಿಸಿದ್ದಾರೆ.

‘ದುಬೈನಲ್ಲಿರುವ ಚೀನಾದ ರಹಸ್ಯ ಬಂಧನ ಕೇಂದ್ರದಲ್ಲಿ ಎಂಟು ದಿನಗಳ ಕಾಲ ಇಬ್ಬರು ಉಯಿಗರ್ ಮುಸ್ಲಿಮರ ಜೊತೆ ಇದ್ದೆ’ ಚೀನಾದ ಯುವತಿ ವು–ಹೌನ್ ತಿಳಿಸಿದ್ದಾರೆ.

ವಾಂಗ್ ಜಿಂಗ್ಯು ಎಂಬ ಯುವಕನ ಜೊತೆಗೆ ವು–ಹೌನ್ ವಿವಾಹ ನಿಶ್ಚಿತವಾಗಿತ್ತು. 2019ರಲ್ಲಿ ಹಾಂಕಾಂಗ್ ಪ್ರತಿಭಟನೆ ಮತ್ತು ಈಚೆಗೆ ಭಾರತದ ಗಡಿಯಲ್ಲಿನ ಘರ್ಷಣೆ ಕುರಿತು ಚೀನಾದ ಕ್ರಮವನ್ನು ಪ್ರಶ್ನಿಸಿ ವಾಂಗ್ ಜಿಂಗ್ಯು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದರು. ಸರ್ಕಾರದೊಂದಿನ ಭಿನ್ನಮತದ ಕಾರಣಕ್ಕಾಗಿ ವಾಂಗ್ ಅವರನ್ನು ಏ.5ರಂದು ಬಂಧಿಸಲಾಗಿತ್ತು.

‘ಬಂಧನ ಭೀತಿಯಲ್ಲಿದ್ದ ನಾನು ತಪ್ಪಿಸಿಕೊಂಡು ಓಡಾಡುತ್ತಿದ್ದಾಗ ದುಬೈನ ಹೋಟೆಲೊಂದರಲ್ಲಿ ಚೀನಾದ ಅಧಿಕಾರಿಗಳು ನನ್ನನ್ನು ಅಪಹರಿಸಿದರು.‌ ದುಬೈನ ವಿಲ್ಲಾವೊಂದನ್ನು ರಹಸ್ಯ ಬಂಧನಕೇಂದ್ರವಾಗಿ ಮಾರ್ಪಡಿಸಿದ್ದು, ಅಲ್ಲಿ ನನ್ನನ್ನು 8 ದಿನಗಳ ಕಾಲ ಇಬ್ಬರು ಉಯಿಗರ್ ಮುಸ್ಲಿಮರ ಜೊತೆಗೆ ಬಂಧನದಲ್ಲಿರಿಸಲಾಗಿತ್ತು’ ಎಂದೂ ಅವರು ಹೇಳಿದ್ದಾರೆ.

ಜೂನ್ 8ರಂದು ವು–ಹೌನ್ ಬಿಡುಗಡೆಯಾಗಿದ್ದು, ಪ್ರಸ್ತುತ ಅವರು ನೆದರ್‌ಲೆಂಡ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು