ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾದಲ್ಲಿ ಕೋವಿಡ್‌ನಿಂದ ಸತ್ತವರ ಪೈಕಿ ಮಧುಮೇಹಿಗಳು ಅಧಿಕ: ಡಬ್ಲ್ಯುಎಚ್ಒ

Last Updated 11 ನವೆಂಬರ್ 2021, 13:47 IST
ಅಕ್ಷರ ಗಾತ್ರ

ನೈರೋಬಿ: ಕೋವಿಡ್‌–19 ಸಾಂಕ್ರಾಮಿಕದಿಂದ ಸಾವಿಗೀಡಾಗಿರುವ ಆಫ್ರಿಕನ್ನರ ಪೈಕಿ ಹೆಚ್ಚಿನವರು ಮಧುಮೇಹ (ಡಯಾಬಿಟಿಸ್‌) ಸಮಸ್ಯೆಯಿಂದ ಬಳಲುತ್ತಿದ್ದವರು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ಹೇಳಿದೆ.

ಆಫ್ರಿಕಾದ 13 ರಾಷ್ಟ್ರಗಳಲ್ಲಿ ಮಧುಮೇಹ ಇರುವ ಕೋವಿಡ್‌–19 ರೋಗಿಗಳ ಪೈಕಿ ಶೇಕಡ 10.2ರಷ್ಟು ಪ್ರಕರಣಗಳಲ್ಲಿ ಸಾವು ಸಂಭವಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ಲೇಷಿಸಿದೆ.

'ಕೋವಿಡ್‌–19 ಸ್ಪಷ್ಟವಾದ ಸಂದೇಶವನ್ನು ತಲುಪಿಸಿದೆ: ಆಫ್ರಿಕಾದಲ್ಲಿ ಮಧುಮೇಹ ರೋಗದ ವಿರುದ್ಧದ ಹೋರಾಟವು ಪ್ರಸ್ತುತ ಸಾಂಕ್ರಾಮಿಕದ ಎದುರಿನ ಹೋರಾಟದಷ್ಟೇ ಗಂಭೀರವಾದುದು' ಎಂದು ಆಫ್ರಿಕಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಆರೊಗ್ಯ ಸಂಸ್ಥೆಯ ಪ್ರಕಾರ, ಆಫ್ರಿಕಾದ ಮಧುಮೇಹ ರೋಗಿಗಳಲ್ಲಿ ಅಂದಾಜು ಶೇಕಡ 70ರಷ್ಟು ಜನರಿಗೆ ಅವರು ಮಧುಮೇಹಿಗಳು ಎಂಬುದು ತಿಳಿದಿಲ್ಲ. 2045ರ ವೇಳೆಗೆ ಆಫ್ರಿಕಾದಲ್ಲಿ ಮಧುಮೇಹಿಗಳ ಸಂಖ್ಯೆ 5.5 ಕೋಟಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ ಆಫ್ರಿಕಾದಲ್ಲಿ 2.4 ಕೋಟಿ ಜನರು ಮಧುಮೇಹಕ್ಕೆ ಒಳಗಾಗಿದ್ದಾರೆ.

ಗುರುವಾರದ ವರೆಗೂ ಆಫ್ರಿಕಾದಲ್ಲಿ ಕೋವಿಡ್‌–19 ದೃಢಪಟ್ಟ 86 ಪ್ರಕರಣಗಳಿದ್ದು, ಸೋಂಕಿನಿಂದ 2.20 ಲಕ್ಷ ಜನರು ಸಾವಿಗೀಡಾಗಿರುವುದಾಗಿ ರಾಯಿಟರ್ಸ್‌ ಮಾಹಿತಿಯಿಂದ ತಿಳಿದು ಬಂದಿದೆ.

ಆಫ್ರಿಕಾದ ಶೇಕಡ 7ರಷ್ಟು ಜನರು ಮಾತ್ರ ಕೋವಿಡ್‌–19 ಲಸಿಕೆಯ ಪೂರ್ಣ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಒಟ್ಟು ಶೇಕಡ 40ರಷ್ಟು ಜನರು ಕೋವಿಡ್‌–19 ಸಂಪೂರ್ಣ ಡೋಸ್‌ ಲಸಿಕೆ ಪಡೆದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT