ಚೀನಾ: 14 ಕಾರ್ಮಿಕರ ಪತ್ತೆಗಾಗಿ ಮುಳುಗು ತಜ್ಞರ ನೆರವು

ಬೀಜಿಂಗ್: ‘ಚೀನಾದ ದಕ್ಷಿಣ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗಕ್ಕೆ ನೀರು ನುಗ್ಗಿ, ನಾಪತ್ತೆಯಾಗಿರುವ 14 ಕಾರ್ಮಿಕರ ಶೋಧಕ್ಕಾಗಿ ಮುಳುಗುತಜ್ಞರು (ಡೈವರ್ಸ್) ಕಾರ್ಯಾಚರಣೆಗೆ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
‘ಸುರಂಗದೊಳಗೆ ನೀರಿನ ಪ್ರಮಾಣವು 11.3 ಮೀಟರ್‌ಗೆ ಇಳಿದಿದೆ. ನೀರಿನೊಳಗೆ ರೋಬೊಟ್‌ಗಳು, ಮಾನವ ರಹಿತ ಹಡಗು ಮತ್ತು ಸೋನಾರ್ ಡಿಟೆಕ್ಟರ್‌ಗಳನ್ನು ನಿಯೋಜಿಸಲಾಗುವುದು’ ಎಂದು ಝುಹೈ ನಗರದ ಉಪ ಮೇಯರ್ ಜಾಂಗ್ ಯಿಶೆಂಗ್ ಅವರು ಹೇಳಿದ್ದಾರೆ.
‘ಶೋಧ ತಂಡಗಳು ಸುರಂಗದೊಳಗಿನಿಂದ ನೀರನ್ನು ನಿಧಾನವಾಗಿ ಹೊರ ಹಾಕುತ್ತಿದೆ. ಈವರೆಗೆ ನಿರ್ಮಿಸಲಾದ 1.8 ಕಿ.ಮೀ ಉದ್ದದ ಸುರಂಗ ಮಾರ್ಗದೊಳಗೆ 1.1 ಕಿ.ಮೀ ದೂರದಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಭಾನುವಾರ ಬೆಳಿಗ್ಗೆ ವೇಳೆಗೆ ಶೋಧ ತಂಡವು 600 ಮೀಟರ್‌ವರೆಗೆ ತಲುಪಿದೆ’ ಎಂದು ವರದಿ ಹೇಳಿದೆ.
‘ಗುರುವಾರ ಮುಂಜಾನೆ 3.30ರ ಸುಮಾರಿಗೆ ಸುರಂಗದೊಳಗೆ ನೀರು ನುಗ್ಗಿದೆ. ಸುರಂಗದೊಳಗೆ ವಿಚಿತ್ರ ಶಬ್ಧ ಕೇಳಿಬಂದಿದೆ. ತಕ್ಷಣವೇ ಅಲ್ಲಿಂದ ಕಾರ್ಮಿಕರನ್ನು ಹೊರ ಬರುವಂತೆ ಸೂಚಿಸಲಾಯಿತು. ಆದರೆ ನೀರು ಒಳಗೆ ನುಗ್ಗಿ 14 ಕಾರ್ಮಿಕರು ಸಿಲುಕಿಕೊಂಡರು’ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.