ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರಿಂದ ನ್ಯೂಯಾರ್ಕ್‌ನಲ್ಲಿ ಶಾಲೆಗಳಿಗೆ ದೀಪಾವಳಿ ರಜೆ

Last Updated 21 ಅಕ್ಟೋಬರ್ 2022, 12:37 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: 2023ರಿಂದ ಶಾಲೆಗಳಿಗೆ ದೀಪಾವಳಿ ರಜೆ ನೀಡುವುದಾಗಿ ಇಲ್ಲಿನ ಮೇಯರ್‌ ಎರಿಕ್‌ ಆ್ಯಡಮ್ಸ್‌ ಹೇಳಿದ್ದಾರೆ.

‘ಶಾಲೆಗಳಿಗೆ ರಜೆ ನೀಡುವುದರಿಂದ ಬೆಳಕಿನ ಹಬ್ಬದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದಂತಾಗುತ್ತದೆ. ಹಲವು ವರ್ಷಗಳ ಹಿಂದೆಯೇ ಈ ಕ್ರಮ ಕೈಗೊಳ್ಳಬೇಕಿತ್ತು. ಎಲ್ಲರನ್ನೂ ಒಳಗೊಳ್ಳುವ ಒಂದು ಉತ್ತಮ ಸಂದೇಶವನ್ನು ಈ ಕ್ರಮವು ನೀಡಲಿದೆ’ ಎಂದು ಎರಿಕ್‌ ಆ್ಯಡಮ್ಸ್‌ ಅಭಿಪ್ರಾಯಪಟ್ಟರು.

ಶಾಲೆಗಳಿಗೆ ದೀಪಾವಳಿ ರಜೆ ನೀಡುವ ನಿರ್ಧಾರ ಮಾಡಿರುವುದಕ್ಕೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್‌ ಜನರಲ್‌ ರಣಧೀರ್‌ ಜೈಸ್ವಾಲ್‌ ಅವರು ಆ್ಯಡಮ್ಸ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT