ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಭವನಕ್ಕೆ ಟ್ರಂಪ್‌: ವರದಿಗಾರರಲ್ಲಿ ಹೆಚ್ಚಿದ ಆತಂಕ

Last Updated 6 ಅಕ್ಟೋಬರ್ 2020, 8:38 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಆಸ್ಪತ್ರೆಯಿಂದ ಶ್ವೇತಭವನಕ್ಕೆ ಮರಳಿದ್ದು, ಶ್ವೇತಭವನದ ವರದಿಗಾರಿಕೆಗೆ ನಿಯೋಜನೆಗೊಂಡಿರುವ ಪತ್ರಕರ್ತರಲ್ಲಿ ಆತಂಕ ಶುರುವಾಗಿದೆ.

ಟ್ರಂಪ್‌, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಮಾಸ್ಕ್‌ ಧರಿಸುವುದು ಕಡಿಮೆ. ಇದು ಅವರನ್ನು ಹಿಂಬಾಲಿಸುವ ಪತ್ರಕರ್ತರಲ್ಲಿ ತಳಮಳ ಹೆಚ್ಚುವಂತೆ ಮಾಡಿದೆ. ಈಗಾಗಲೇಶ್ವೇತ ಭವನದ ವರದಿಗಾರಿಕೆಗೆ ನಿಯೋಜನೆಗೊಂಡಿರುವ ಪತ್ರಕರ್ತರ ಪೈಕಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ಶ್ವೇತ ಭವನದಮಾಧ್ಯಮ ಕಾರ್ಯದರ್ಶಿ ಕೇಲಿಹ್‌ ಮೆಕ್‌ಎನಾನಿಗೂ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಕೇಲಿಹ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವ ವೇಳೆ ಮಾಸ್ಕ್‌ ಧರಿಸುತ್ತಿರಲಿಲ್ಲ. ಇತ್ತೀಚೆಗೆ ಅವರ ಸಹಾಯಕರಲ್ಲೂ ಕೋವಿಡ್‌–19 ದೃಢಪಟ್ಟಿತ್ತು.

‘ಟ್ರಂಪ್‌ ಹಾಗೂ ಅವರ ತಂಡದವರು ನಮ್ಮ ಸಹೊದ್ಯೋಗಿಗಳ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ’ ಎಂದು ಅಮೆರಿಕನ್‌ ಅರ್ಬನ್‌ ರೇಡಿಯೊ ನೆಟ್‌ವರ್ಕ್ಸ್‌ನ ಪ್ರತಿನಿಧಿ ಏಪ್ರಿಲ್‌ ರ‍್ಯಾನ್‌ ಕಿಡಿಕಾರಿದ್ದಾರೆ.

‘ಟ್ರಂಪ್‌ ಮತ್ತು ಅವರ ತಂಡದವರ ನಡವಳಿಕೆಯಿಂದ ನಮಗೆ ಕಿರಿಕಿರಿಯುಂಟಾಗುತ್ತಿದೆ’ ಎಂದು ಎಬಿಸಿ ನ್ಯೂಸ್‌ನ ಶ್ವೇತ ಭವನದ ಪ್ರತಿನಿಧಿ ಜೊನಾಥನ್‌ ಕಾರ್ಲ್‌ ಹೇಳಿದ್ದಾರೆ.

‘ತಮ್ಮ ಜೊತೆ ಕೆಲಸ ಮಾಡುವ ಸಿಬ್ಬಂದಿ ಹಾಗೂ ತಮ್ಮನ್ನು ಹಿಂಬಾಲಿಸುವ ಪತ್ರಕರ್ತರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಟ್ರಂಪ್‌ ತುಂಬಾ ಕಾಳಜಿವಹಿಸುತ್ತಾರೆ. ಇದನ್ನು ಗಂಭೀರವಾಗಿಯೂ ಪರಿಗಣಿಸಿದ್ದಾರೆ’ ಎಂದು ಅವರ ವಕ್ತಾರ ಜುಡ್‌ ಡೀರೆ ನುಡಿದಿದ್ದಾರೆ.

‘ಶ್ವೇತ ಭವನದಲ್ಲಿರುವ ಮಾಧ್ಯಮ ಕೊಠಡಿಯೊಳಗೆ ಪ್ರವೇಶಿಸುವವರೆಲ್ಲಾ ಕಡ್ಡಾಯವಾಗಿ ಮುಖಗವಸು ಧರಿಸಬೇಕೆಂದು ಶ್ವೇತ ಭವನದ ಮಾಧ್ಯಮ ಪ್ರತಿನಿಧಿಗಳ ಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕುರಿತ ಭಿತ್ತಿ ಪತ್ರಗಳನ್ನೂ ಅಲ್ಲಲ್ಲಿ ಅಂಟಿಸಲಾಗಿದೆ. ಆದರೆ ಶ್ವೇತ ಭವನದ ಸಿಬ್ಬಂದಿ ಈ ನಿಯಮವನ್ನು ಪಾಲಿಸುವುದೇ ಇಲ್ಲ’ ಎಂದೂ ಕಾರ್ಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನೀವು ಏಕೆ ಮುಖಗವಸು ಧರಿಸುವುದಿಲ್ಲ‘ ಎಂದು ಶ್ವೇತ ಭವನದ ಸಿಬ್ಬಂದಿಯನ್ನು ಕೇಳಿದರೆ ನಾವು ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ‘ನೆಗೆಟಿವ್‌’ ಬಂದಿದೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ’ ಎಂದು ಸಿಬಿಎಸ್‌ ನ್ಯೂಸ್‌ನ ಪ್ರತಿನಿಧಿ ವೀಜಿಯಾ ಜಿಯಾಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT