ಸೋಮವಾರ, ಸೆಪ್ಟೆಂಬರ್ 26, 2022
20 °C

ಟ್ರಂಪ್‌ ರೆಸಾರ್ಟ್‌ನಿಂದ ದಾಖಲೆ ವಶ; ರಾಷ್ಟ್ರೀಯ ಭದ್ರತೆ ಬಗ್ಗೆ ಹೆಚ್ಚಿದ ಕಳವಳ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ‘ಮರ್ ಎ ಲಗೊ’ ರೆಸಾರ್ಟ್‌ನಿಂದ ಅಧಿಕೃತ ದಾಖಲೆಗಳನ್ನು ಸರ್ಕಾರ ಜಪ್ತಿ ಮಾಡಿರುವುದರ ಹಿಂದೆಯೇ, ‘ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದಿದೆ’ ಎಂಬ ಅವರ ಹಿಂದಿನ ಹೇಳಿಕೆಯು ಮುನ್ನೆಲೆಗೆ ಬಂದಿದೆ ಎಂದು ಭದ್ರತಾ ವಲಯದ ‍ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದು ದೇಶದ ಮೇಲೆ ನಿಯಮಬಾಹಿರವಾಗಿ ಕಣ್ಗಾವಲು ಇರಿಸಿದ್ದ ಆರೋಪವು ಟ್ರಂಪ್‌ ಮೇಲಿದೆ. ಸರಿಯಾಗಿ ರಕ್ಷಣಾ ಮಾಹಿತಿ ನಿರ್ವಹಿಸಿಲ್ಲ, ಅಧಿಕೃತವಲ್ಲದವರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರ ವಿರುದ್ಧದ ಸರ್ಚ್‌ ವಾರಂಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಅಧ್ಯಕ್ಷರಾಗಿದ್ದಾಗ ಟ್ರಂಪ್ ಅವರು ಸೂಕ್ಷ್ಮತೆಯನ್ನು ಮರೆತು ಮಾಹಿತಿ ಹಂಚಿಕೊಂಡಿದ್ದಾರೆ. ತುಂಬ ಗೋಪ್ಯವಾಗಿದ್ದ ಮಾಹಿತಿಯನ್ನು ರಷ್ಯಾದ ವಿದೇಶಾಂಗ ಸಚಿವರ ಜೊತೆಗೆ ಹಂಚಿಕೊಂಡಿದ್ದರು ಎಂದೂ ಉಲ್ಲೇಖಿಸಲಾಗಿದೆ.

ಕಾನೂನು ಇಲಾಖೆಯು ನೀಡಿರುವ ಸರ್ಚ್‌ ವಾರಂಟ್‌ ಮತ್ತೆ ಈಗ ರಾಷ್ಟ್ರೀಯ ಭದ್ರತೆ ಕುರಿತ ಆತಂಕವನ್ನು ಹೆಚ್ಚಿಸಿದೆ ಎಂದು ನಿವೃತ್ತ ಅಧಿಕಾರಿ ಮೇರಿ ಮೆಕಾರ್ಡ್ ಅವರು ಪ್ರತಿಕ್ರಿಯಿಸಿದರು. 

ಈ ಸಂಬಂಧ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಟ್ರಂಪ್ ಅವರು, ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ವರ್ಗೀಕರಿಸಲಾಗಿತ್ತು. ಹೆಚ್ಚಿನ ಭದ್ರತೆಯಲ್ಲಿ ಇಡಲಾಗಿತ್ತು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು