ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಶ್‌ವಿಲ್ಲೆಯಲ್ಲಿ ಬಾಂಬ್‌ ಸ್ಫೋಟ; ಮೂವರಿಗೆ ಗಾಯ

Last Updated 26 ಡಿಸೆಂಬರ್ 2020, 6:21 IST
ಅಕ್ಷರ ಗಾತ್ರ

ನ್ಯಾಶ್‌ವಿಲ್ಲೆ: ಇಲ್ಲಿನ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದು ಕ್ರಿಸ್‌ಮಸ್‌ ಹಬ್ಬದ ಮುಂಜಾನೆ ಸ್ಪೋಟಗೊಂಡು, ಆತಂಕ ಸೃಷ್ಟಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

‘ಇಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ವರದಿ ಮೇರೆಗೆ ನಾವು ಘಟನಾ ಸ್ಥಳಕ್ಕೆ ಆಗಮಿಸಿದೆವು. ಈ ವೇಳೆ ಇಲ್ಲಿ ನಿಲ್ಲಿಸಲಾಗಿದ್ದ ವಾಹನಯೊಂದರಲ್ಲಿ ಬಾಂಬ್‌ ಪತ್ತೆಯಾದ ಕಾರಣ ಹತ್ತಿರದ ಕಟ್ಟಡಗಳಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿದೆವು. ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಬರುವಷ್ಟರಲ್ಲಿ ವಾಹನದಲ್ಲಿದ್ದ ಬಾಂಬ್‌ ಸ್ಪೋಟಗೊಂಡಿದೆ’ ಎಂದು ಮೆಟ್ರೋ ನ್ಯಾಶ್‌ವೆಲ್‌ ಪೊಲೀಸ್‌ ಮುಖ್ಯಸ್ಥ ಜಾನ್‌ ಡ್ರೇಕ್‌ ತಿಳಿಸಿದರು.

‘ಜನರಲ್ಲಿ ಭಯ ಮತ್ತು ಗೊಂದಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಮೇಲೆ ದಾಳಿ ನಡೆಸಲಾಗಿದೆ. ಆದರೆ ನಮ್ಮ ನಗರದ ಜನರಲ್ಲಿರುವ ಉತ್ಸಾಹವನ್ನು ಹಾಳು ಮಾಡಲು ಸಾಧ್ಯವಿಲ್ಲ’ ಎಂದು ಮೇಯರ್‌ ಜಾನ್‌ ಕೂಪರ್ ಪ್ರತಿಕ್ರಿಯಿಸಿದರು.

‘ಇದು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿ. ಆದರೆ ಇದರ ಹಿಂದಿನ ಉದ್ದೇಶ ಅಥವಾ ಗುರಿಯ ಬಗ್ಗೆ ಇನ್ನೂ ತಿಳಿದಿಲ್ಲ. ಅಲ್ಲದೆ ಪೊಲೀಸರಿಗೆ ದಾಳಿಗೂ ಮುನ್ನ ಯಾವುದೇ ರೀತಿಯ ಬೆದರಿಕೆ ಕರೆಗಳು ಕೂಡ ಬಂದಿಲ್ಲ’ ಎಂದು ಡ್ರೇಕ್‌ ತಿಳಿಸಿದರು.

‘ಈ ದಾಳಿಯಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ. ಈ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT