ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ವಿಮಾನ ನಿಲ್ದಾಣ ಪ್ರಯಾಣಿಕ ಸಂಖ್ಯೆ ಶೇ 127ರಷ್ಟು ಏರಿಕೆ

Last Updated 21 ಫೆಬ್ರುವರಿ 2023, 12:13 IST
ಅಕ್ಷರ ಗಾತ್ರ

ದುಬೈ: ಇಲ್ಲಿನ ಮುಖ್ಯ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕ ಸಂಖ್ಯೆಯಲ್ಲಿ ಶೇ 127ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ 6.6 ಮಂದಿ ಪ್ರಯಾಣಿಸಿದ್ದಾರೆ ಎಂದು ವಿಮಾನಯಾನ ಪ್ರಾಧಿಕಾರ ಹೇಳಿದೆ.

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು ಈ ವರ್ಷ 7.8 ಕೋಟಿ ಪ್ರಯಾಣಿಕರ ನಿರೀಕ್ಷೆ ಹೊಂದಿದೆ. ಯುಎಎಇಯಲ್ಲಿ ಹವಾಮಾನ ಬದಲಾವಣೆ ಸಮ್ಮೇಳನ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳು ನಡೆಯಲಿರುವುದರಿಂದ ಪ್ರಯಾಣಿಕ ಸಂಖ್ಯೆ ಏರಿಕೆಯಾಗಲಿದೆ ಎಂದು ಸ್ಥಳೀಯ ಪ್ರಾಧಿಕಾರ ಅಂದಾಜಿಸಿದೆ.

2022ರಲ್ಲಿ 6.4 ಕೋಟಿ ಜನ ಪ್ರಯಾಣಿಸಬಹುದೆಂದು ಪ್ರಾಧಿಕಾರ 2022ರ ನವೆಂಬರ್‌ನಲ್ಲಿ ಅಂದಾಜಿಸಿತ್ತು. ಆದರೆ ನಿರೀಕ್ಷೆಗಿಂತ ಹೆಚ್ಚು ಜನ ಪ್ರಯಾಣಿಸಿದ್ದಾರೆ.

ಇದರಲ್ಲಿ ಶೇ 60 ಪ್ರಯಾಣಿಕರು ಯುಎಇಗೆ ಭೇಟಿ ನೀಡಿದವರು. ಉಳಿದ ಶೇ 40 ಬೇರೆ ರಾಷ್ಟ್ರಗಳಿಗೆ ಪ್ರಯಾಣಿಸಲಿಕ್ಕಾಗಿ ದುಬೈಗೆ ಬಂದಿಳಿದವರು ಎಂದು ವಿಮಾನ ನಿಲ್ದಾಣದ ಮುಖ್ಯಸ್ಥ ಪೌಲ್‌ ಗ್ರಿಫಿತ್ಸ್‌ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಆದಾಗ್ಯೂ ಕೋವಿಡ್‌ಗಿಂತ ಮೊದಲಿನ ಪ್ರಯಾಣಿಕ ಓಡಾಟಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಎಂದು ಅವರು ಹೇಳಿದ್ದಾರೆ. 2024ರ ವೇಳೆಗೆ ಕೋವಿಡ್‌ಗಿಂತ ಮೊದಲಿನಷ್ಟೇ ಪ್ರಯಾಣಿಕರು ಮತ್ತೆ ದುಬೈಗೆ ಬಂದಿಳಿಯಬಹುದೆಂದು ಸಂಸ್ಥೆ ಅಂದಾಜಿಸಿದೆ. ವಾರಕ್ಕೆ 25 ವಿಮಾನಗಳು ಈ ನಿಲ್ದಾಣದಿಂದ 7 ನಗರಗಳಿಗೆ ಹಾರಾಟ ನಡೆಸುತ್ತಿವೆ. 5 ವಿಮಾನಯಾನ ಸಂಸ್ಥೆಗಳು ಇಲ್ಲಿ ವಹಿವಾಟು ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT