ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇ ಹಣಕಾಸು ಸಚಿವ ಶೇಖ್‌ ಹಮ್ದಾನ್‌ ಬಿನ್‌ ರಷೀದ್‌ ನಿಧನ

Last Updated 24 ಮಾರ್ಚ್ 2021, 9:47 IST
ಅಕ್ಷರ ಗಾತ್ರ

ದುಬೈ: ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನ (ಯುಎಇ) ಹಣಕಾಸು ಸಚಿವ ಶೇಖ್‌ ಹಮ್ದಾನ್‌ ಬಿನ್‌ ರಷೀದ್‌(75) ಬುಧವಾರ ನಿಧನರಾದರು.

ನಿಧನಕ್ಕೆ ಖಚಿತ ಕಾರಣಗಳನ್ನು ಅಧಿಕಾರಿಗಳು ತಿಳಿಸಿಲ್ಲ. ಹಲವು ತಿಂಗಳುಗಳಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು. ಶಸ್ತ್ರಚಿಕಿತ್ಸೆಗಾಗಿ ಇತ್ತೀಚೆಗೆ ವಿದೇಶಕ್ಕೂ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

1971ರಲ್ಲಿ ಯುಎಇ ಮೊದಲ ಸಚಿವ ಸಂಪುಟ ರಚಿಸಿದಾಗ ಶೇಖ್‌ ಹಮ್ದಾನ್‌ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಅಂದಿನಿಂದಲೂ ಹಣಕಾಸು ಸಚಿವರಾಗಿಯೇ ಕಾರ್ಯನಿರ್ವಹಿಸಿದರು. ವಿದೇಶಿ ಹೂಡಿಕೆ ಆಕರ್ಷಿಸುವುದು, ದೇಶದ ತೈಲ ಆಸ್ತಿಯ ನಿರ್ವಹಣೆ ಮತ್ತು ದುಬೈ ಅನ್ನು ಹಣಕಾಸಿನ ಕೇಂದ್ರವನ್ನಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು.

ಶೇಖ್‌ ಹಮ್ದಾನ್‌ ಅವರು ದುಬೈ ಆಡಳಿತದಲ್ಲಿಯೂ ಉಪನಾಯಕರಾಗಿದ್ದರು. ಶೇಖ್‌ ಹಮ್ದಾನ್‌ ಅವರ ಸಹೋದರ ಶೇಖ್‌ ಮೊಹಮ್ಮದ್‌ ಬಿನ್‌ ರಷೀದ್‌ ಅಲ್‌ ಮಾಕ್ತೌಮ್‌ ಅವರು ದುಬೈ ಆಡಳಿತದ ನೇತೃತ್ವ ವಹಿಸಿಕೊಳ್ಳುವ ಜತೆಗೆ ಯುಎಇ ಪ್ರಧಾನಿ ಮತ್ತು ಉಪರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT