ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಜೈಶಂಕರ್‌ ಚರ್ಚೆ

Last Updated 28 ಮೇ 2021, 8:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರನ್ನು ಗುರುವಾರ ಭೇಟಿಯಾದ ವೇಳೆ ಕೋವಿಡ್‌ ನಿರ್ವಹಣೆ ಮತ್ತು ಇಂಡೋ–ಫೆಸಿಫಿಕ್‌ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಜೈಶಂಕರ್ ಅವರು, ಅಧ್ಯಕ್ಷ ಜೋ ಬೈಡನ್‌ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಸಚಿವರಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಜೈಶಂಕರ್‌ ಅವರು,‘ ಜೇಕ್‌ ಸುಲ್ಲಿವಾನ್‌ ಅವರನ್ನು ಭೇಟಿ ಮಾಡಿರುವುದು ಸಂತೋಷವನ್ನುಂಟು ಮಾಡಿತು. ನಾವು ಇಂಡೋ–ಫೆಸಿಫಿಕ್ ಮತ್ತು ಅಫ್ಗಾನಿಸ್ತಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆವು. ಕೋವಿಡ್‌ ಎದುರಿಸಲು ಅಮೆರಿಕವು ಭಾರತಕ್ಕೆ ನೆರವು ಒದಗಿಸುತ್ತಿದೆ. ಭಾರತ ಮತ್ತು ಅಮೆರಿಕದ ಲಸಿಕೆ ಸಹಭಾಗಿತ್ವವು ದೊಡ್ಡ ವ್ಯತ್ಯಾಸವನ್ನುಂಟು ಮಾಡಬಹುದು’ ಎಂದು ತಿಳಿಸಿದ್ದಾರೆ.

‘ಜನರ ನಡುವಿನ ಸಹಕಾರ ಮತ್ತು ಮೌಲ್ಯಗಳು ಭಾರತ–ಅಮೆರಿಕ ಸಹಭಾಗಿತ್ವದ ಅಡಿಪಾಯ. ಈ ಸಹಭಾಗಿತ್ವವು ನಮಗೆ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಇಂಡೋ–ಫೆಸಿಫಿಕ್‌ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡಲಿದೆ’ ಎಂದು ಸುಲ್ಲಿವಾನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಅಮೆರಿಕದ ಸರ್ಕಾರ, ಖಾಸಗಿ ಸಂಸ್ಥೆಗಳು, ಜನರು ಈವರೆಗೆ ₹3624ಕೋಟಿ ಮೌಲ್ಯದ ಕೋವಿಡ್‌ ಪರಿಹಾರ ಸಾಮಗ್ರಿಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ’ ಎಂದು ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರೆ ಎಮಿಲಿ ಹಾರ್ನೆ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT